“ಸ್ವರ್ಗೀಯ ದೇವನ ಇಚ್ಚಾ ಪ್ರಕಾರ ಪ್ರಕಟಗೊಂಡ ಧರ್ಮದ ಉದ್ದೇಶವು ಪ್ರಪಂಚದ ಮಾನವರ ಮಧ್ಯೆ ಐಕ್ಯತೆ ಮತ್ತು ಸಾಂಗತ್ಯವನ್ನು ಸ್ಥಾಪಿಸುವುದೇ ಆಗಿದೆ; ಅದನ್ನು ಹಗೆತನ ಮತ್ತು ಭಿನ್ನಭಿಪ್ರಾಯಕ್ಕೆ ಕಾರಣವಾಗುವಂತೆ ಮಾಡಬೇಡಿ.”


ಬಹಾಉಲ್ಲಾ

ಬಹಾಯಿ ಧರ್ಮದ ಪ್ರಾರಂಭದಿಂದಲೂ ಭಾರತೀಯ ಉಪಖಂಡವು ಬಹಾಯಿ ಚರಿತ್ರೆಯೊಡನೆ ನಿಕಟವಾಗಿ ಸಂಬಂಧ ಹೊಂದಿತ್ತು. ಸಾಯೀದ ಇ ಹಿಂದಿ ಎಂಬವನು ಈ ಉಪಖಂಡದಿಂದ ಬಾಬ್ ರವರನ್ನು ಅನುಸರಿಸಿದವರಲ್ಲಿ ಪ್ರಮುಖನು [ಬಾಬ್ ರವರು ಬಹಾಉಲ್ಲಾ ರವರ ಮುಂಗಾಮಿ]ಭಾರತದಿಂದ ಅವನಂತೆ ಹಲವಾರು ಜನರು ಬಾಬ್ ರವರ ಕ್ಷಿಪ್ರ ಕಾರ್ಯಾವಧಿಯಲ್ಲಿ ಅವರ ಅನುಯಾಯಿಗಳಾದರು. ಬಾಬ್ ರವರ ಕಾರ್ಯೋದ್ದೇಶದಲ್ಲಿ ಅವರ ಬೋಧನೆಯ ಪ್ರಕಾಶವು ಹಳ್ಳಿ ,ಪಟ್ಟಣ ನಗರಗಳಲ್ಲಿ ಹಬ್ಬಿತು, ಅದರಲ್ಲಿ ಬೋಂಬೆ [ಈಗ ಮುಂಬಯಿ] ಹೈದರಾಬಾದ್, ಜೌನಾಪುರ, ಆಮಪುರ ಮತ್ತು ಪಾಲಂಪುರ ಮುಖ್ಯವಾದವುಗಳು.

ಬಹಾಉಲ್ಲಾರವರ ಬೋಧನೆಗಳನ್ನು ೧೮೭೨ ರಲ್ಲಿ ಜಮಾಲ್ ಎಫೆಂಡಿಯವರು ಪ್ರಥಮವಾಗಿ ತಂದರು, ಅವರು ಒಬ್ಬ ಪರ್ಶಿಯನ್ ಪ್ರಾಧನ್ಯರು, ಅವರು ಉಪಖಂಡದಾದ್ಯಂತ ಸಂಚರಿಸಿದರು. ಅವರ ಭೇಟಿಯು ರಾಮಪುರ ಮತ್ತು ಲಕ್ನೋ ದ ಉತ್ತರಕ್ಕೆ, ಕಲ್ಕತ್ತ ಮತ್ತು ರಂಗೂನ್ ನ ಪೂರ್ವಾತ್ಯಕ್ಕೆ, ಪೂರ್ವದಲ್ಲಿ ಬರೋಡಾದಿಂದ ಪಶ್ಚಿಮದ ಮುಂಬೈ ತನಕ ಮತ್ತು ಕೊನೆಯದಾಗಿ ಚೆನ್ನೈ ಯಿಂದ ಕೊಲಂಬೋ ತನಕ ಸಂಚರಿಸಿದರು. ಅವರು ತಾನು ಭೇಟಿಯಾದ ಎಲ್ಲರಿಗೂ ಅಂದರೆ ನವಾಬ್ ರುಗಳು, ರಾಜಕುಮಾರಿಯರು ಮತ್ತು ಕೊಲೊನಿಯ ಆಡಳಿತಗಾರರು ಮತ್ತು ಸಾಮಾನ್ಯ ಜನರಿಗೂ ಬಹಾಉಲ್ಲಾ ರವರ ಸಂದೇಶವನ್ನು ತಲಪಿಸಿದರು. ಆಗಿನ ಕಾಲದ ಸಾಮಾಜಿಕ ಸ್ಥಿತಿಗತಿಗಳಿಗೆ ವಿರೋಧವಾಗಿ ಅವರು ಎಲ್ಲ ಜನರೊಡನೆ ಅಂದರೆ ಸಾಮಾಜಿಕ ಪ್ರಕಾರಗಳ ಬೇಧವಿಲ್ಲದೆ, ಜಾತಿ ಧರ್ಮಗಳ ಬೇಧವನ್ನುಮರೆತು ಎಲ್ಲರೊಡನೆಯೂ ಬೆರೆತರು.

ಶತಮಾನದ ಕೊನೆಯಲ್ಲಿ, ಬೋಂಬೆ, ದೆಹಲಿ, ಪುನೆ ಮತ್ತು ಹೈದೆರಬಾದ್ ಗಳಲ್ಲಿ ಸಣ್ಣ ಬಹಾಯಿ ಸಮುದಾಯಗಳ ಸ್ಥಾಪನೆಯಾಯಿತು. ಬಹಾಯಿಗಳು ತಮ್ಮ ಉಪಖಂಡದ ಪ್ರಥಮ ಆಧ್ಯಾತ್ಮಿಕ ಸಭೆಯನ್ನು ಬೆಳೆಯುತ್ತಿರುವ ಬಹಾಯಿ ಸಮುದಾಯಗಳ ಆಡಳಿತಕ್ಕೆ ಅನುಕೂಲವಾಗುವಂತೆ ೧೯೨೩ ರಲ್ಲಿ ಚುನಾಯಿಸಿಕೊಂಡರು.

ಇಪ್ಪತ್ತನೇ ಶತಮಾನದ ಆದಿ ಭಾಗದಲ್ಲಿ ಬಹಾಯಿಧರ್ಮವು ಭಾರತದಲ್ಲಿ ಗಣನೀಯವಾಗಿ ಬೆಳೆಯಿತು, ಬಹಾಉಲ್ಲಾರವರ ಬೋಧನೆಯು ಕ್ರಮೇಣವಾಗಿ ಆ ಕಾಲದ ನೇತಾರರ ಮತ್ತು ಚಿಂತನಕಾರರ ಗಮನವನು ಸೆಳೆಯಿತು. ಮಹಾತ್ಮ ಗಾಂಧೀಜಿಯವರು ಹಲವು ಬಹಾಯಿ ಮಿತ್ರರುಗಳ ಒಡನಾಟದಿಂದಾಗಿ ” ಬಹಾಯಿ ಧರ್ಮವು ಮನುಕುಲಕೊಂದು ಸಾಂತ್ವನ” ಎಂದರು. ಅದೇ ರೀತಿ ರಬೀಂದ್ರನಾಥ್ ಠಾಗೋರರು ಹಲವು ಪ್ರಮುಖ್ಯ ಬಹಾಯಿಗಳನ್ನು ಭೇಟಿ ಮಾಡಿ ”ಏಷಿಯಾದಿಂದ ಬಂದ ಇತ್ತೀಚೆಗಿನ ಪ್ರವಾದಿ” ಎಂದು ಬಣ್ಣಿಸಿ ”ಅವರ ಸಂದೇಶವು ನಾಗರೀಕತೆಯ ಬೆಳವಣಿಗೆಗೆ ಅತಿ ಮುಖ್ಯವಾದುದು” ಎಂದರು.

೧೯೬0- ಮತ್ತು ೭೦ ರಲ್ಲಿ ಬಹಾಉಲ್ಲಾರವರ ಸಂದೇಶವನ್ನು ಭಾರತದಲ್ಲಿ ಜನ ಮಾನಸದೊಡನೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದವರೊಡನೆ ಹಂಚತೊಡಗಿದರು. ಧರ್ಮದ ಬೋಧನೆಗಳಿಗೆ ಜನರ ಪ್ರತಿಕ್ರಿಯೆಯು ಪ್ರೋತ್ಸಾಹದಾಯಕವಾಗಿತ್ತು, ಸಾವಿರಾರು ಜನರು ಬಹಾಉಲ್ಲಾರವರ ಬೋಧನೆಗಳಲ್ಲಿ ತಮ್ಮದೇ ಸಂಕಲ್ಪವಾದ ವಸುದೇವ ಕುಟುಂಬದ ರೂಪುರೇಷೆಗಳನ್ನು ಕಂಡುಕೊಳ್ಳ ತೊಡಗಿದರು. ಈ ಹೊಸ ಚೈತನ್ಯದಾಯಕ ವಿಚಾರಗಳು ಪ್ರಸ್ತುತಸಮಾಜದ ಜರೂರತೆಗಾಗಿ ಈ ಬೋಧನೆಗಳಲ್ಲಿ ಇವೆ ಎಂದು ಅವರು ಕಂಡು ಕೊಂಡರು.

ತಮ್ಮ ಸಮಾಜವು ಎದುರಿಸುತ್ತಿರುವ ಸವಾಲುಗಳಿಗೆ ಈ ತತ್ವಗಳನ್ನು ಅಳವಡಿಸಲು ಸಾವಿರಾರು ಜನರು ಪ್ರಾರಂಭಿಸಿದರು. ಭಾರತದಲ್ಲಿ ನೂರಾರು ಪ್ರಜಾತಂತ್ರದ ಮೂಲಕ ಸ್ಥಳೀಯ ಆಧ್ಯಾತ್ಮಿಕ ಸಭೆಗಳನ್ನು ಚುನಾವಣೆ ಮಾಡಿದರು ಮತ್ತು ತಮ್ಮ ಸ್ಥಾನೀಕ ಜನರ ಅಗತ್ಯಗಳಿಗೆ ಸ್ಪಂದಿಸತೊಡಗಿದರು. ಬಾಲಕರ ನೈತಿಕ ಶಿಕ್ಷಣಕ್ಕೆ ಹೊಸ ಜರೂರತೆಯು ಭಾರತದಾದ್ಯಂತದಲ್ಲಿ ಸುಮಾರು ಶೈಕ್ಷಣಿಕ ಸಂಸ್ಥೆಗಳು ಹುಟ್ಟಿಕೊಂಡವು. ೧೯೮೦ರಲ್ಲಿ ನೂರಾರು ಟ್ಯುಟೋರಿಯಲ್ ಶಾಲೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಮತ್ತು ಬಾಹಾಯಿ ಬೋಧನೆಗಳಿಂದ ಸ್ಪೂರ್ತಿಗೊಂಡ ಹಲವು ಶೈಕ್ಷಣಿಕ ಶಾಲೆಗಳು ಪ್ರಾರಂಭವಾದವು, ಅದೇ ರೀತಿ ವ್ಯವಸಾಯ ಶಿಕ್ಷಕರ ತರಬೇತಿ ಕಸುಬುಗಳ ತರಬೇತಿ, ಸಾಕ್ಷರತೆ, ವಾತಾವರಣದ ಉಸ್ತುವಾರಿ ಮಹಿಳಾ ಸಬಲೀಕರಣ ಮತ್ತು ಆರೋಗ್ಯ ಮುಂತಾದ ಚಟುವಟಿಕೆಗಳು ಪ್ರಾರಂಭವಾದವು.

ದೆಹಲಿಯಲ್ಲಿನ ಬಹಾಯಿ ಆರಾಧನಾ ಮಂದಿರದ ಕಟ್ಟಡದ ಕೆಲಸವು ಬಹುಶ: ಮಾನವ ಹೃದಯ ಮತ್ತು ಸಮಾಜದಲ್ಲಿ ಬಹುಶ: ಅತಿ ಹೆಚ್ಚು ಪ್ರಭಾವ ಬೀರಿ ಗುರುತಿಸಿಕೊಂಡ ಚಿಹ್ನೆಯಾಗಿತ್ತು. ತಾವರೆಯಾಕಾರದ ಕಟ್ಟಡವು ಅತಿ ದುರ್ಭರ ಭವಣೆಯಲ್ಲೂ ತಾವರೆಯು ಹೊಸ ಪ್ರಪಂಚಕ್ಕೆ ಹೊಸದಾಗಿ ವಿಕಸಿಸ ಬಲ್ಲುದು ಎಂಬ ಮನೋಭಾವನೆಯನ್ನು ಬಿಂಬಿಸುತ್ತದೆ. ಅದು ಐಕ್ಯತೆಯ ಚಿಹ್ನೆಯಾಗಿಯೂ ಬಿಂಬಿಸಲ್ಪಡುತ್ತದೆ. ೧೯೮೬ ರಲ್ಲಿ ಅದರ ಉದ್ಘಾಟನೆಯಾದಾಗಿಲಿಂದ ದಿನವೂ ಸಾಧರಣ ಸರಾಸರಿ ಹತ್ತು ಸಾವಿರ ದಷ್ಟು ಜನ ದಿನವೂ ಎಲ್ಲ ಧರ್ಮದ, ವರ್ಣಗಳ ಮತ್ತು ವಿವಿಧ ಹಿನ್ನೆಲೆಯಿಂದ ಬಂದು ಮೌನ ಪ್ರಾರ್ಥನೆಯಲ್ಲಿ ಸಾಮಾನ್ಯ ಏಕ ಸೃಷ್ಟಿ ಕರ್ತನನ್ನು ಆರಾಧಿಸುತ್ತಾರೆ.

ಭಾರತದಲ್ಲಿ ಬಹಾಯಿ ಸಮುದಾಯವು ತನ್ನ ಗಾತ್ರ ಮತ್ತು ಸಾಮರ್ಥ್ಯದಲ್ಲಿ ಬೆಳೆಯುತ್ತಿದ್ದಂತೆ, ಸಮಾಜದ ಜನರ ಜೀವನದಲ್ಲಿ ಪ್ರಾಮುಖ್ಯ ಪಾತ್ರಗಳಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಿತು. ಧಾರ್ಮಿಕ ಸೌಹಾರ್ಧತೆ, ಸ್ತ್ರೀಪುರುಷ ಸಮಾನತೆ, ಶಿಕ್ಷಣ, ಲಿಂಗ ಸಮಾನತೆ ಆಡಳಿತ ಮತ್ತು ಬೆಳವಣಿಗೆಯ ಪ್ರಕಾರಗಳಲ್ಲಿ ಬಹಾಯಿ ಕೊಡುಗೆಗಳು ರಾಷ್ಟ್ರೀಯ ಮಟ್ಟದಲ್ಲಿ ತನ್ನ ಕೊಡುಗೆಯನ್ನು ನೀಡುತ್ತಿತ್ತು

ಇಂದು ಭಾರತದಲ್ಲಿ ಎರಡು ಮಿಲಿಯದಷ್ಟು ಬಹಾಯಿಗಳಿದ್ದಾರೆ. ಅವರು ತಮ್ಮ ರಾಷ್ಟ್ರದ ಸೇವೆಯಲ್ಲಿ ಬೆಂಬಲಿಗರೊಡನೆ ಐಕ್ಯತೆ ಮತ್ತು ನ್ಯಾಯ, ಪೂರ್ವಾಗ್ರಹಳಿಂದ ಮುಕ್ತಿ, ಸ್ತ್ರೀ ಪುರುಷರು ಹೆಗಲಿಗೆ ಹೆಗಲು ಕೊಟ್ಟು ಸಮಾಜದ ಉನ್ನತಿಗೆ ಶ್ರಮಿಸುವುದು ಮಕ್ಕಳು ಮತ್ತು ಯುವಕರು ಆಧ್ಯಾತ್ಮಿಕ ಮತ್ತು ವೈಜ್ಞಾನಿಕವಾಗಿ ಉತ್ತಮ ಶಿಕ್ಷಣವನ್ನು ಪಡೆಯುವಂತೆ, ಮತ್ತು ಅವರ ಆಧ್ಯಾತ್ಮಿಕ ಭಕ್ತಿಭಾವದ ಜೀವನವು ಸಮಾಜದ ದುಷ್ಟ ಶಕ್ತಿಗಳಿಂದ ರಕ್ಷಿಸುವಂತೆ ನೋಡಿಕೊಳ್ಳುತ್ತಾರೆ.