“ಪ್ರಪಂಚದ ಅಸ್ತಿತ್ವದಲ್ಲಿ ಪ್ರಾರ್ಥನೆಗಿಂತ ಹೆಚ್ಚು ಮಧುರವಾದುದು ಬೇರೆ ಯಾವುದೂ ಇಲ್ಲ. ಅತೀ ಅನುಗ್ರಹಿತ ಸ್ಥಿತಿ ಎಂದರೆ ಅದು ಪ್ರಾರ್ಥನೆ ಮತ್ತು ಯಾಚನೆಯ ಭಾವ. ಪ್ರಾರ್ಥನೆ ಎಂದರೆ ಅದು ದೇವರ ಜೊತೆ ಮಾತನಾಡುವುದು. ಅತಿ ಹೆಚ್ಚಿನ ಸಾಧನೆ ಎಂದರೆ ಅತಿ ಮಧುರವಾದ ಸ್ಥಿತಿಯು ದೇವರ ಜೊತೆ ಮಾತನಾಡುವುದು ಮತ್ತು ಬೆರೆ ಯಾವುದೂ ಅಲ್ಲ.”


ಅಬ್ದುಲ್-ಬಹಾ

ಭಾರತದಾದ್ಯಂತ ಹಳ್ಳಿ ಮತ್ತು ನೆರೆಹೊರೆಯಲ್ಲಿ ಸಾಮುದಾಯಿಕ ಆರಾಧನೆಗಾಗಿ ಪಕ್ವತೆಯು [ಹೂವರಳುವಿಕೆಯು] ಸಾಕ್ಷೀಕರಿಸುತ್ತಿತ್ತು.ಸಾವಿರಾರು ಜನರರು ವಿವಿಧ ಹಿನ್ನೆಲೆಗಳಿಂದ, ತಿಂಗಳು, ವಾರ ಅಥವಾ ದೈನಂದಿಕವಾಗಿ ಮನೆಗಳಲ್ಲಿ ಸೇರಲಾರಂಭಿಸಿದರು, ಅಲ್ಲಿ ಅವರು ಪ್ರಾರ್ಥಿಸುತ್ತ, ಪವಿತ್ರ ಬರಹಗಳನ್ನು ವಾಚಿಸುತ್ತಾ, ತಮ್ಮ ಜೀವನದಲ್ಲಿ ಅದರ ಅನ್ವಯಗಳ ಬಗ್ಗೆ ಚರ್ಚಿಸುತ್ತಿದ್ದರು.ವಿವಿಧ ಹಿನ್ನೆಲೆ ಮತ್ತು ಪ್ರಾಯಗಳಿಂದ ಬಂದ ಚಿಕ್ಕ ಗುಂಪಿನ ಈ ಮಿತ್ರರುಗಳು ಆಧ್ಯಾತ್ಮಿಕ ಜೀವನದಲ್ಲಿ ಉನ್ನತಿಯನ್ನು ಕಂಡುಕೊಳ್ಳುವಂತೆ ಸೇವೆ ಸಲ್ಲಿಸಲಾರಂಭಿಸಿದರು, ಮತ್ತು ಒಂದು ಪ್ರದೇಶದ ಸಮುದಾಯ ಐಕ್ಯತೆ ಮತ್ತು ಆಧ್ಯಾತ್ಮಿಕ ಬಂಧಗಳನ್ನು ನಿಕಟವಾಗಿ ಹೆಣೆಯುವಂತೆ ಮಾಡುವಲ್ಲಿ ಸೇವೆ ಸಲ್ಲಿಸುವರು.

ದೆಹಲಿಯಲ್ಲಿ ತಾವರೆಯ ದೇವಾಲಯ ಎಂದು ಪ್ರಸಿಧ್ಧವಾದ ಆರಾಧನಾ ಮಂದಿರವಿದ್ದು ವಿವಿಧ ಹಿನ್ನೆಲೆಗಳಿಂದ ಬಂದ ಬಹಾಯಿಗಳಿಗೆ ಆರಾಧನೆಗಾಗಿ ಒಂದು ಮಂದಿರವಿದೆ. ಎಲ್ಲೆಲ್ಲ ದೇವರ ಪ್ರಾರ್ಥನೆಯನ್ನು ಮಾಡಲಾಗುತ್ತದೆಯೋ ಆ ಜಾಗವು ಅನುಗ್ರಹಿತವಾದುದು ಮತ್ತು ಅದನ್ನು ಆರಾಧನಾ ಮಂದಿರ ಎಂದು ಬಹಾಯಿಗಳು ನಂಬುತ್ತಾರೆ. ಬಹಾಯಿಧರ್ಮದಲ್ಲಿ ಮತ ಪಂಡಿತರು ಮತ್ತು ಗುರುಗಳು ಇಲ್ಲದ್ದರಿಂದ ತಮ್ಮ ಸಮುದಾಯದಲ್ಲಿ ಆಧಾತ್ಮಿಕತೆಯನ್ನು ಹೆಚ್ಚಿಸುವ ನೇತಾರನಂತಹ ಜವಾಬ್ದಾರಿಯು ಆತನ ಅಥವ ಅವಳ ಮೇಲಿರುತ್ತದೆ ಮತ್ತು ಈ ಜವಾಬ್ದಾರಿಯನ್ನು ನಿಭಾಯಿಸಲು ಭಕ್ತ್ಯಾತ್ಮಕ ಕೂಟಗಳನ್ನು ನಡೆಸಿಕೊಡುವುದನ್ನು ಅವರು ಮಾಡಬಹುದು.