“ಮಾನವನು ಒಬ್ಬ ಅಗಣಿತ ಬೆಲೆಬಾಳುವ ವಜ್ರಗಳಂತೆ ಎಂದು ಪರಿಭಾವಿಸು. ಅದರ ಅಗಾಧತೆಯನ್ನು ಶಿಕ್ಷಣ ಮಾತ್ರ ಹೊರತರಬಲ್ಲುದು ಮತ್ತು ಮಾನವ ಜನಾಂಗವು ಅದರಿಂದ ಪ್ರಯೋಜನಗಳನ್ನು ಪಡೆಯಬಲ್ಲುದು”

ಬಹಾಉಲ್ಲಾ

ಮಾನವನ ಭವ್ಯತೆಯ ಬಗ್ಗೆ ದೃಢ ಭಾವದಿಂದ, ಬಹಾಯಿಗಳು ಮಾನವನಲ್ಲಿ ಅಂತರ್ಗತವಾಗಿದ್ದ ಸಾಮರ್ಥ್ಯಗಳನ್ನು ಪೋಷಿಸಿ ಕ್ರಮ ಪ್ರಕಾರವಾಗಿ ಅವುಗಳನ್ನು ಸಮಾಜದ ಅಗತ್ಯಗಳಿಗೆ ತಕ್ಕಂತೆ ಉಪಯೋಗಿಸಬೇಕೆಂಬುದನ್ನು ನಂಬುತ್ತಾರೆ. ಸಮಾಜದ ಉನ್ನತಿಗೆ ಬಿಡಿ ವ್ಯಕ್ತಿಗಳಲ್ಲಿದ್ದ ಸಾಮರ್ಥ್ಯಗಳನ್ನು ಪೋಷಿಸಿ ಬಳಸುವ ಸಾಧನವೇ ಶಿಕ್ಷಣ. ನೈಜ ಆರ್ಥಿಕಾಭಿವೃಧ್ಧಿಗೆ ಕೊಡುಗೆಗಳನ್ನು ನೀಡಲು ಮಾನವನ ಅಸ್ತಿತ್ವದ ಆಧ್ಯಾತ್ಮಿಕ ಮತ್ತು ಭೌತಿಕ ಪ್ರಕಾರಗಳಲ್ಲಿ ಶಿಕ್ಷಣವು ಪರಿಹಾರವನ್ನು ಸೂಚಿಸಬೇಕು.

ಸಮುದಾಯಗಳನ್ನು ಕಟ್ಟುವ ಪ್ರಕ್ರಿಯೆಯ ಮಧ್ಯ ಭಾಗದಲ್ಲಿ ಸಾಮಾನ್ಯರಿಗೆ ಒಳ್ಳೆಯದಾಗುವ ಜೀವನ ಪರ್ಯಂತದ ಸೇವಾ ಭಾವವಗಳನ್ನು ಆಧ್ಯಾತ್ಮಿಕ ಮತ್ತು ಬೌಧ್ಧಿಕ ಅಂಗವಾಗಿ ಶೈಕ್ಷಣೀಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಮಕ್ಕಳು
ವಿವಿಧ ಪ್ರಕಾರಗಳಲ್ಲಿ ಮಕ್ಕಳಿಗೆ ಆಧ್ಯಾತ್ಮಿಕ ಶಿಕ್ಷಣದ ತರಗತಿಗಳನ್ನು ನಡೆಸುತ್ತಿದ್ದಂತೆ ಆಧ್ಯಾತ್ಮಿಕ ಮತ್ತು ನಂಬುಗೆಗಳ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಗುಣ ಮತ್ತು ಅಭ್ಯಾಸಗಳ ಗುಣಮಟ್ಟವನ್ನು ಹೆಚ್ಚಿಸುವಂತೆ ತರಗತಿಗಳನ್ನು ನಡೆಸಿಕೊಡುವರು.

ಕಿಶೋರರಿಗಾಗಿ
ನಿರ್ಧಾರಗಳನ್ನು ಮಾಡಲು ಬೇಕಾದ ನೈತಿಕ ಚೌಕಟ್ಟು ಮತ್ತು ಆಧ್ಯಾತ್ಮಿಕ ಭಾವಗಳನ್ನು ಅಭಿವೃಧ್ಧಿಗೊಳಿಸುವ ಕಾರ್ಯಕ್ರಮದ ಗುಂಪುಗಳಲ್ಲಿ ದೇಶದಾದ್ಯಂತದ ಕಿರಿಯ ಯುವಕರು ತಮ್ಮನ್ನುತಾವೇ ತೊಡಗಿಸಿಕೊಳ್ಳುತ್ತಾರೆ. ತಮ್ಮ ಅಭಿವ್ಯಕ್ತಿಸುವ ಸಾಮರ್ಥ್ಯವನ್ನು ಅವರು ಅಭಿವೃಧ್ಧಿಗೊಳಿಸುವರು ಮತ್ತು ತಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ತಮ್ಮ ಅಮಿತ ಚೈತನ್ಯವನ್ನು ಒಂದು ಕಾಲುವೆಯಂತಾಗಿಸುವರು.

ಯುವಕರು ಮತ್ತು ವಯಸ್ಕರು
ಶೈಕ್ಷಣಿಕ ಕ್ರಮಗಳಲ್ಲಿ ವಿದ್ಯಾಭ್ಯಾಸವನ್ನು ವಿಕೇಂದ್ರೀಕರಿಸಿದ ಬಳಿಕ ದೇಶದಾದ್ಯಂತದ ಹಳ್ಳಿ, ನೆರೆಹೊರೆ ಮತ್ತು ನಗರಗಳಲ್ಲಿ ಯುವಕರು ಮತ್ತು ವಯಸ್ಕರು ತಮ್ಮ ಬೌಧ್ಧಿಕ, ನೈತಿಕ, ಆಧ್ಯಾತ್ಮಿಕ ಮತ್ತು ಪ್ರಾತ್ಯಕ್ಷಿಕ ಸೇವಾ ಸಾಮರ್ಥ್ಯಗಳನ್ನು ವೃಧ್ಧಿಗೊಳಿಸುವರು