“ದೇವರ ಧರ್ಮ ಮತ್ತು ನಂಬುಗೆಗಳನ್ನು ಪ್ರಚಾರ ಪಡಿಸುವ ಮೂಲೋದ್ದೇಶ, ಮಾನವ ಜನಾಂಗದ ಹಿತಾಶಕ್ತಿ ಮತ್ತು ಐಕ್ಯತೆಗಳನ್ನು ಬಲಪಡಿಸುವುದು ಮತ್ತು ಮಾನವರಲ್ಲಿ ಪ್ರೇಮ ಮತ್ತು ಸಾಂಗತ್ಯತೆಯ ಚೈತನ್ಯವನ್ನು ಉನ್ನತಿಗೇರಿಸುವುದೇ ಆಗಿದೆ.”


ಬಹಾಉಲ್ಲಾ
 
 
 
 

ಪ್ರಪಂಚದಾದ್ಯಂತ ಹಳ್ಳಿ ಪಟ್ಟಣ ನಗರಗಳಲ್ಲಿ ಮಿಲಿಯ ಗಟ್ಟಲೆ ಬಹಾಯಿಗಳು ಅಧ್ಯಾತ್ಮಿಕ ಮತ್ತು ಭೌತಿಕ ಅಭಿವೃಧ್ಧಿ ಶೀಲ ಸಮುದಾಯಗಳನ್ನು ಸ್ಥಾಪಿಸಲು ಯಾರೆಲ್ಲಾ ಆಧ್ಯಾತ್ಮಿಕ ಮತ್ತು ಸೇವಾ ಮನೋಭಾವದಿಂದ ಹೊಸ ನಾಗರೀಕತೆಗೆ ಅಡಿಪಾಯವನ್ನು ಹಾಕಲು ಪ್ರಯತ್ನಿಸುವರೋ ಅವರೊಡನೆ ಕೈ ಜೋಡಿಸುತ್ತಿರುವರು. ಪ್ರಪಂಚದ ಅತಿ ಕಿರಿಯ ಧರ್ಮ ಬಹಾಯಿಯ ಅನುಯಾಯಿಗಳಿಗೆ ಇದು ವಿಶ್ವವ್ಯಾಪಿ ಮಾನವ ಜನಾಂಗದ ಆಧ್ಯಾಮಿಕ ಮತ್ತು ಭೌತಿಕತೆಗಳ ಐಕ್ಯತೆಗಳ ಉನ್ನತಿಗೆ ಶ್ರಮಿಸುವ ಪ್ರಕ್ರಿಯೆಯೇ ಆಗಿದೆ.

ಭಾರತದಲ್ಲಿ ಎಲ್ಲಾ ಸಾಮಾಜಿಕ ಪ್ರಕಾರಗಳಿಂದ ಬಹಾಯಿಗಳಿದ್ದಾರೆ - ಅಂಡಮಾನ್ ನ ಕಾಡುಗಳಿಂದ ಮುಂಬೈಯ ಬಹುಮಹಡಿ ಸಮುಚ್ಚಯಗಳು, ತಮಿಳುನಾಡು ಕರಾವಳಿಯಿಂದ ಸಿಕ್ಕಿಂ ನ ಬೆಟ್ಟಗಾಡು ಪ್ರದೇಶಗಳಿಂದ ಬಂದವರಿದ್ದಾರೆ. ತಮ್ಮ ಮನೆಯ ಬಾಗಿಲುಗಳನ್ನು ಸಾಮುದಾಯಿಕ ಆರಾಧನೆಗಳಿಗೆ, ಮಕ್ಕಳ, ಯುವಕರ ಮತ್ತು ವಯಸ್ಕರ ಆಧ್ಯಾತ್ಮಿಕ ಶಿಕ್ಷಣಕ್ಕೆ ಸ್ಥಳೀಯ ಜನರ ಸಹಕಾರದೊಡನೆ ಐಕ್ಯತೆ, ನ್ಯಾಯದ ತಳಹದಿಯ ಮೇಲೆ ಸಾಮಾನ್ಯರ ಒಳ್ಳೆಯದಕ್ಕೆ ವಿವಿಧ ಹಿನ್ನೆಲೆಯ ಜನರೊಡನೆ ಸಾಮುದಾಯಿಕ ಅಭಿವೃಧ್ಧಿಗೆ ಕೈಜೋಡಿಸುತ್ತಾರೆ.

ವಿಶಾಲ, ಪುರಾತನ ಮತ್ತು ವಿಭಿನ್ನ ವಾಸ್ತವತೆಯ ಭಾರತವು ಇಪ್ಪತ್ತೊಂದನೆ ಶತಮಾನದೆಡೆ ಗಾಂಭೀರ್ಯತೆಯೊಡನೆ ಹೆಜ್ಜೆ ಹಾಕುತ್ತಿದೆ, ಒಂದು ಹೊಸ ದಿಗಂತವು ಅದರ ಮುಂದೆ ತೆರೆದು ನಿಂತಿದೆ. ಈ ಭವಿಷ್ಯತ್ತಿಗೆ ಬೇಕಾದ ಅವಕಾಶಗಳು ಮತ್ತು ಸವಾಲುಗಳನ್ನು ಬಿಡಿವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಮುದಾಯಗಳ ಆಧ್ಯಾತ್ಮಿಕ ಪ್ರಬುಧ್ಧತೆ ಮತ್ತು ಬೌಧ್ಧಿಕ ಸಾಮರ್ಥ್ಯದ ಮೂಲಕ ಈ ಸಂದಿಗ್ಧ ಮತ್ತು ಅತಿ ಅಂತರ್ಸಂಪರ್ಕ ಹೊಂದಿದ ಜಗತ್ತಿಗೆ ಪೂರಕವಾಗಿ ಸಾಗುತ್ತಿದೆ.

ನ್ಯಾಯ ಮತ್ತು ಏಕತೆಯ ಸಮುದಾಯವನ್ನು ಕಟ್ಟಲು ಬೇಕಾದ ಆಧ್ಯಾತ್ಮಿಕ ಅಂತರ್ದೃಷ್ಟಿ ಮತ್ತು ವೈಜ್ಞಾನಿಕ ನೋಟದತ್ತ ದೇಶದ ಜನರನ್ನು ತೊಡಗಿಸಿಕೊಳ್ಳುವತ್ತ ಭಾರತದ ಬಹಾಯಿ ಸಮುದಾಯವು ಧೃಢ ಸಂಕಲ್ಪದೊಡನೆ ಜನರಲ್ಲಿ ಸಾಮರ್ಥ್ಯ ತುಂಬುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

Home -kn

ಧರ್ಮವು ಪುನುರುತ್ಥಾನ ಗೊಂಡುದುದು

ಚರಿತ್ರೆಯಾದ್ಯಂತ ದೇವರು ತನ್ನ ಅವತಾರವನ್ನು ಹಲವು ದಿವ್ಯಾವತಾರಗಳ ಮೂಲಕ ಪ್ರಕಟಪಡಿಸಿದನು. ಈ ಅವತಾರಗಳಲ್ಲಿ ಬಹಾಉಲ್ಲಾರವರು ಇತ್ತೀಚಿನವರು, ಅವರು ಈ ಹೊಸ ಯುಗಕ್ಕೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಬೋಧನೆಗಳನ್ನು ತಂದಿದ್ದಾರೆ.


ಮತ್ತಷ್ಟು ಓದು...
Home -kn

ಸಮುದಾಯವನ್ನು ಕಟ್ಟುವುದು

ಭಾರತದಾದ್ಯಂತ ಸಮಾಜದ ಎಲ್ಲ ಹಿನ್ನೆಲೆಯುಳ್ಳವರು ಬಿಡಿ ವ್ಯಕ್ತಿಗಳು ಆಧ್ಯಾತ್ಮಿಕ ಮತ್ತು ಭೌತಿಕ ಬೆಳವಣಿಗೆಯ ಸಮುದಾಯಕ್ಕೆ ಅಡಿಪಾಯವನ್ನು ಹಾಕುತ್ತಿದ್ದಾರೆ. ಅವರು ಪ್ರಾರ್ಥನೆ ಮತ್ತು ಸೇವಾ ಮನೋಭಾವದ ಸುತ್ತ ತಮ್ಮ ಚಟುವಟಿಕೆಗಳನ್ನು ತೊಡಗಿಸಿಕೊಳ್ಳುತ್ತ ಸರ್ವರ ಒಳ್ಳೆಯದಕ್ಕೆ ಶ್ರಮಿಸುತ್ತಿದ್ದಾರೆ.


ಮತ್ತಷ್ಟು ಓದು...
Home -kn

ಮತ್ತಷ್ಟು ಓದು

ಬಹಾಯಿ ಆರಾಧನಾ ಮಂದಿರವು ಸಾಮುದಾಯಿಕ ಜೀವನದ ಎರಡು ಅಂತರ್ಗತ ಭಾವಗಳಾದ ಆರಾಧನೆ ಮತ್ತು ಸೇವಾ ಭಾವಗಳನ್ನು ಹತ್ತಿರ ತರುತ್ತಿದೆ. ಆರಾಧನಾ ಮಂದಿರವು ಧಾರ್ಮಿಕ ಏಕತೆಯನ್ನು ಪ್ರತಿನಿಧಿಸುತ್ತದೆ ಮತ್ತು ದೇವರ ಎಲ್ಲಾ ಅವತಾರಗಳ ಬೋಧನೆಯು ಅಂತಿಮವಾಗಿ ಒಂದೇ ವಾಸ್ತವತೆಯತ್ತ ತಿರುಗುತ್ತದೆ ಎಂಬ ಭಾವವನ್ನು ಪ್ರತಿನಿಧಿಸುತ್ತದೆ.


ಮತ್ತಷ್ಟು ಓದು...