“ನೀವು ವಾಸಿಸುವ ಕಾಲದ ಅಗತ್ಯಗಳ ಬಗ್ಗೆ ಆಸಕ್ತಿದಾಯಕ ಕಾಳಜಿಯಿಂದಿರಿ, ಮತ್ತು ನಿಮ್ಮ ಮಾತುಕತೆಗಳನ್ನು ಅದರ ಅಗತ್ಯಗಳಿಗೆ ಮತ್ತು ತಾಳುವಿಕೆಯತ್ತ ಕೇಂದ್ರೀಕರಿಸಿರಿ.”



ಬಹಾಉಲ್ಲಾ

ಸಮಾಜದ ಅಸ್ತಿತ್ವದಲ್ಲಿರಬೇಕಾದ, ಮಾನವತೆಯು ಪಕ್ವತೆಯ ಕಾಲದತ್ತ ಸಾಗುತ್ತಿದ್ದಂತೆ ಅದರ ಸ್ವಭಾವ, ಆಲೋಚನೆಗಳು ಮತ್ತು ಮಾನವತೆಯನ್ನು ಬಾಧಿಸುತ್ತಿರುವ ಮೂಲಭೂತ ವಿಷಯಗಳಲ್ಲಿ ನಮ್ಮ ವಿಚಾರಗಳು ಬದಲಾಗಬೇಕು. ಪ್ರಪಂಚದ ಬಹಾಯಿ ಸಮುದಾಯಗಳಲ್ಲಿ ತಮ್ಮ ಕಾಳಜಿ ಮತ್ತು ಕಲಿಯುವಿಕೆಯು ತಮ್ಮ ಆಲೋಚನಾ ವಿಚಾರಗಳಲ್ಲಿನ ಪರಿವರ್ತನೆಯ ವಿಚಾರಗಳಿಗೆ ತಮ್ಮ ಕೊಡುಗೆಗಳನ್ನು ನೀಡುವುದು. ಬಹಾಯಿ ಸಮುದಾಯವು ಮಾನವತೆಯ ಸದ್ಭಾವಕ್ಕೆ ಸಂಬಂಧ ಪಟ್ಟ ಸ್ತ್ರೀ ಪುರುಷ ಸಮಾನತೆ, ಶಾಂತಿ, ಆಡಳಿತ, ಸಾರ್ವಜನಿಕ ಆರೋಗ್ಯ ಮತ್ತು ಅಭಿವೃಧ್ಧಿ ಮುಂತಾದ ವಿಚಾರಗಳಿಗೆ ಸಂಬಂಧ ಪಟ್ಟ ಪ್ರವಚನಗಳಲ್ಲಿ ಭಾಗವಹಿಸಲು ಕಲಿಯುತ್ತಿದ್ದಾರೆ.

ಬಹಾಯಿಗಳು ಇಂತಹ ಪ್ರವಚನಗಳಲ್ಲಿ ಭಾಗವಹಿಸುತ್ತಿರುವ ಉದ್ದೇಶವು ಅವರು ನಮ್ಮ ಬಹಾಯಿ ವಿಚಾರಗಳನ್ನು ಒಪ್ಪಿಕೊಳ್ಳಲಿ ಎಂದು ಅವರನ್ನು ಒಪ್ಪಿಸಲೆಂದಲ್ಲ. ಅಥವಾ ಈ ಕುರಿತು ಸಾರ್ವಜನಿಕ ಚಟುವಟಿಕೆ ಅಥವಾ ಶೈಕ್ಷಣಿಕ ಪ್ರಯತ್ನಗಳ ಮೂಲಕ ನಮ್ಮ ಪ್ರಯತ್ನವೆಂದು ಅದರ ಅರ್ಥವಲ್ಲ. ಬಹಾಯಿಗಳು ಕಲಿಯುವ ನಿಲುವನ್ನು ಹೊಂದಿಕೊಂಡು ನೈಜವಾದ ಸಂಭಾಷಣೆಯಲ್ಲಿ ನಿರತವಾಗುವ ಪ್ರಯತ್ನ ಅವರದಗಿರುವಾಗ, ಪ್ರಸ್ತುತ ಮಾನವತೆಯು ಎದುರಿಸುತ್ತಿರುವ ಹವಾಮಾನದಲ್ಲಿನ ಬದಲಾವಣೆ, ಮಹಿಳೆಯರ ಆರೋಗ್ಯ, ಆಹಾರಗಳ ಉತ್ಪಾದನೆ ಮತ್ತು ಬಡತನ ನಿರ್ಮೂಲನ ಮುಂತಾದ ಸಮಸ್ಯಗಳಿಗೆ ನಿರ್ದುಷ್ಟ ಪರಿಹಾರವನ್ನು ಸೂಚಿಸಲು ಬಹಾಯಿಗಳು ಮುಂದಾಗುವುದಿಲ್ಲ ಆದರೂ ಬಹಾಯಿಗಳು ಹಲವು ಪ್ರಕಾರಗಳಲ್ಲಿ ಪ್ರಪಂಚದಾದ್ಯಂತ ಬಹಾಉಲ್ಲಾರವರು ಅದಕ್ಕೆ ಸೂಚಿಸಿದ, ನಾಗರಿಕತೆಯ ಅಭಿವೃಧ್ಧಿ ಮತ್ತು ಸಮಾನ ಮನಸ್ಕ ಬಿಡಿವ್ಯಕ್ತಿಗಳು ಮತ್ತು ಗುಂಪಿನವರೊಂದಿಗೆ, ಪರಿಹಾರದ ಮಾರ್ಗಗಳನ್ನು ಹಂಚಿಕೊಳ್ಳಲು ಕಾತರದಿಂದಿರುತ್ತಾರೆ

ಭಾರತದ ಬಹಾಯಿ ಸಮುದಾಯಕ್ಕೆ ಸ್ತ್ರೀ ಪುರುಷ ಸಮಾನತೆ, ಸಾಮಜಿಕಾರ್ಥಿಕ ಅಭಿವೃಧ್ಧಿ ಯೋಜನೆ, ಸಮಾಜದಲ್ಲಿ ಧರ್ಮದ ಪಾತ್ರ ಮಕ್ಕಳ ಹಕ್ಕುಗಳು ಮತ್ತು ಯುವ ಮತ್ತು ಸಾಮಾಜಿಕ ಪರಿವರ್ತನೆ ಮುಂತಾದ ಪ್ರವಚನಗಳಲ್ಲಿ ಭಾಗವಹಿಸಿದ ವಿಪುಲಾನುಭವವಿದೆ.