“ರ್ಗ ಮತ್ತು ಭೂಮಿಯಲ್ಲಿರುವುದೆಲ್ಲವನ್ನೂ ನಾನು ನಿನಗಾಗಿ ವಿಧಾಯಕ ಮಾಡಿದ್ದೇನೆ, ಆದರೆ ಮಾನವನ ಹೃದಯವನ್ನಲ್ಲ, ಅದನ್ನು ನಾನು ನನ್ನ ಸೌಂದರ್ಯ ಮತ್ತು ವೈಭವದ ವಾಸಸ್ಥಳವನ್ನಾಗಿ ಮಾಡಿದ್ದೇನೆ.”ಬಹಾಉಲ್ಲಾ

ಕಾಲವು ಸರಿದಂತೆ, ಹೆಚ್ಚು ಹೆಚ್ಚು ಜನರು ಬಹಾಉಲ್ಲಾರವರ ಹೊಸ ಪ್ರಪಂಚದ ಮತ್ತು ಅದನ್ನು ಸಾಧಿಸುವತ್ತ ಬೇಕಾದ ಅಂತರ್ದೃಷ್ಟಿಯುಳ್ಳ ತತ್ವಗಳನ್ನು ಕಂಡುಕೊಳ್ಳುತ್ತಿದ್ದಾರೆ. ತುಂಬಾ ಜನ ಇನ್ನೂ ಮುಂದಕ್ಕೆ ಹೋಗಿ ಬಹಾಯಿ ಧರ್ಮವನ್ನು ಒಂದು ಧರ್ಮವನ್ನಾಗಿ ಅನ್ವೇಷಿಸುವರು ಈ ರೀತಿ ಮಾಡುವಲ್ಲಿ, ಮಾನವನ ಸ್ವಭಾವದ ಬಗ್ಗೆ , ದೇವರು ಮಾನವನಿಗೆ ಮಾರ್ಗವನ್ನು ತೋರುವ ವಿಧಾನಗಳ ಈ ಪ್ರಸ್ತುತದ ಅಸ್ತಿತ್ವದಲ್ಲಿನ ಜೀವನದ ಉದ್ದೇಶ ಮತ್ತು ಮರಣ ವ್ಯಕ್ತಿಗತ ಮತ್ತು ಸಾಮುದಾಯಿಕ ಭಕ್ತ್ಯಾತ್ಮಕಗಳ ಕುರಿತು ಇರುವ ವಿವರಣೆಗಳನ್ನು ಶೋಧಿಸುತ್ತಿದ್ದಾರೆ.ಮತ್ತು ಆವರು ನಿಜವಾಗಿಯೂ ಪವಿತ್ರ ಬರಹಗಳು ಮತ್ತು ನಿಯಮಗಳ ಬಗ್ಗೆಯೂ ಮತ್ತು ಆಡಳಿತಾತ್ಮಕ ನಿಯಮಗಳ ಬಗ್ಗೆಯೂ ಅರಿತುಕೊಳ್ಳುವರು. ಈ ಬಹಾಉಲ್ಲಾರವರ ಈ ಬೋಧನೆಗಳನ್ನು ಕಾರ್ಯಗತಗೊಳಿಸುವಲ್ಲಿ ಮುಡುಪಾಗಿಡುವ ಉತ್ಸಾಹದಾಯಕ ಸಮುದಾಯದ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು ಬಹಾಯಿಗಳು ತಮ್ಮ ಧಾರ್ಮಿಕ ನಂಬುಗೆಗಳನ್ನುಸ್ವಾಭಾವಿಕವಾಗಿಯೇ ಇತರರೊಡನೆ ಹಂಚಿಕೊಳ್ಳುವರು, ಮತ್ತು ಯಾರಲ್ಲಿಯಾದರು, ಆಕೆಯೋ ಅಥವಾ ಆತನ ಹೃದಯದಲ್ಲಿ ನಂಬಿಕೆಯ ಕಿಡಿ ಪ್ರಜ್ವಲಿಸಿದರೆ ಆತನನ್ನು ಅಥವಾ ಆಕೆಯನ್ನು ಸ್ವಾಗತಿಸುವರು, ಮತ್ತು ಚೈತನ್ಯ ಭರಿತ ಬಹಾಯಿ ಸಮುದಾಯದ ಸಕ್ರಿಯ ಸದಸ್ಯನಾಗುವರು ಮತ್ತು ಅದರ ಮುಂದುವರಿವ ಬೆಳವಣಿಗೆಗೆ ಮತ್ತು ಅದರ ಚೈತನ್ಯ ಭರಿತಕ್ಕೆ ಸಹಕರಿಸುವರು. ಆದರೂ, ಸಾಮನ್ಯ ಪ್ರಚಲಿತವಿರುವ ಮತ ಪರಿವರ್ತನೆಯು ಇಲ್ಲಿ ಅನ್ವಯವಾಗುವುದಿಲ್ಲ ಮತ್ತು ಮತಾಂತರವನ್ನು ಬಹಾಯಿ ಧರ್ಮದಲ್ಲಿ ನಿಷೇಧಿಸಲಾಗಿದೆ.

ಈ ಬೆಳಕಿನಲ್ಲಿ, ಒಬ್ಬ ಬಹಾಯಿಯು ತನ್ನ ನಂಬುಗೆಗಳನ್ನು ಇತರರೊಡನೆ ಹಂಚಿಕೊಂಡಾಗ ಅದು ಇತರರಿಗೆ ಮನದಟ್ಟು ಮಾಡುವ ಪ್ರಯತ್ನವಲ್ಲ ಅಥವಾ ಒಂದು ರ್ನಿದಿಷ್ಟ ವಿಷಯವನ್ನು ವಿಶದೀಕರಿಸುವಂತಹುದಲ್ಲ ಅದು ಒಂದು ಅರ್ಥಪೂರ್ಣ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುವ ಒಂದು ಅಸ್ತಿತ್ವದ ಮೂಲಭೂತ ವಿಷಯದ ಬಗ್ಗೆ ಮತ್ತು ಸತ್ಯವನ್ನು ಅರಸುವ ಮತ್ತು ತಪ್ಪು ಅಭಿಪ್ರಾಯಗಳನ್ನು ತೊಲಗಿಸುವ ಒಂದು ಪ್ರಕ್ರಿಯೆ. “ನೀವು ಒಂದು ಸತ್ಯವನ್ನು ತಿಳಿದುಕೊಂಡಿದ್ದರೆ” , ಬಹಾಉಲ್ಲಾ ರವರು ಹೇಳುತ್ತಾರೆ”, ಬಹಾಉಲ್ಲಾ ರವರು ಹೇಳುತ್ತಾರೆ, “ನೀನು ಒಂದು ವಜ್ರಾಭರಣವನ್ನು ಹೊಂದಿದ್ದರೆ, ಮತ್ತು ಅದು ಇತರರಲ್ಲಿ ಇಲ್ಲದಿದ್ದರೆ ಅದನ್ನು ಅವರೊಡನೆ ಅತ್ಯಂತ ದಯಾಪೂರ್ಣತೆಯಿಂದ ಮತ್ತು ಒಳ್ಳೆಯ ಮನಸ್ಸಿನಿಂದ ಹಂಚಿಕೊಳ್ಳಿರಿ ಅದು ಸ್ವೀಕರಿಸಲ್ಪಟ್ಟರೆ, ನಿಮ್ಮ ಅದರ ಕುರಿತಾಗಿನ ಉದ್ದೇಶವು ನೆರವೇರಿತು ಯಾರಾದರು ಅದನ್ನು ತಿರಸ್ಕರಿಸಿದರೆ ಅವರನ್ನು ಅವರಷ್ಟಕ್ಕೇ ಬಿಟ್ಟುಬಿಡಿ ಮತ್ತು ದೇವರಲ್ಲಿ ಅವನಿಗೆ ಮಾರ್ಗದರ್ಶನ ತೋರುವಂತೆ ವಿನೀತನಾಗಿ ಪ್ರಾರ್ಥಿಸಿರಿ.”

ನಂಬಿಕೆಗಳ ಅಭಿವ್ಯಕ್ತಿಸುವಿಕೆಯು ಮಾತ್ರ ಒಂದು ಉತ್ತಮ ಪ್ರಪಂಚವನ್ನು ಕಟ್ಟಲು ಸಾಕಾಗುವುದಿಲ್ಲ, ನಿಗದಿತ ಕೃತ್ಯ ಕೂಡಾ ಬೇಕು. ಬಹಾಉಲ್ಲಾ ಬರೆಯುತ್ತಾರೆ: “ಪ್ರತಿಯೊಬ್ಬ ಅಂತರ್ದೃಷ್ಟಿಯುಳ್ಳ ಮತ್ತು ಅರಿವು ಇರುವ ವ್ಯಕ್ತಿ ಪವಿತ್ರ ಗ್ರಂಥದಲ್ಲಿ ಬರೆದಿರುವುದೆಲ್ಲವನ್ನೂ ಅಸ್ತಿತ್ವ ಮ.ತ್ತು ಕಾರ್ಯದಲ್ಲಿ ಅಳವಡಿಸುವಂತೆ ಪ್ರಯತ್ನಿಸುವುದು ಆತನಿಗೆ ತಕ್ಕುದಾದುದೇ ಸರಿ.”

Scroll Up