“ಪ್ರತಿಯೊಬ್ಬ ಅಂತರ್ದೃಷ್ಟಿ ಮತ್ತು ಅರಿವುವುಳ್ಳ ವ್ಯಕ್ತಿಯು ಏನನ್ನು ಬರೆದಿದೆಯೋ ಅದನ್ನು ಅಸ್ತಿತ್ವಕ್ಕೆ ಮತ್ತು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸಬೇಕೆಂದು ವಿಧಾಯಕ ಮಾಡಲಾಗಿದೆ.....ಈ ದಿನಗಳಲ್ಲಿ ಇಡಿ ಮಾನವ ಜನಾಂಗದ ಸೇವೆಗಾಗಿ ತನ್ನನ್ನು ತಾನೇ ಮುಡುಪಾಗಿಸಿಕೊಂಡವನು ನಿಜವಾಗಿಯೂ ಒಬ್ಬ ಮನುಷ್ಯ.”ಬಹಾಉಲ್ಲಾ

ಒಂದು ರ್ನಿದಿಷ್ಟ ನೆರೆಹೊರೆ ಅಥವಾ ಹಳ್ಳಿಯಲ್ಲಿ ಸಮುದಾಯ ಕಟ್ಟುವ ಕಾರ್ಯವು ಹೆಚ್ಚಾಗುತ್ತಿದ್ದಂತೆ, ಈ ಕಾರ್ಯದಲ್ಲಿ ತೊಡಗಿದ ಮಿತ್ರರುಗಳು ಆ ಜನ ಸಮುದಾಯವು ಎದುರಿಸುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ವಿಷಯಗಳತ್ತ ಗಮನ ಸೆಳೆಯುತ್ತಾರೆ ಬಹಾಯಿ ಧರ್ಮದ ಆಧ್ಯಾತ್ಮಿಕ ಬೋಧನೆಗಳಲ್ಲಿ ಕೆಲವು ರ್ನಿದಿಷ್ಟ ಅಂತರ್ದೃಷ್ಟಿ ಮತ್ತು ತತ್ವಗಳನ್ನು ಅಲ್ಲಿ ಬಾಧಿಸುತ್ತಿರುವ ಸ್ತ್ರೀ ಪುರುಷ ಸಮಾನತೆ, ವಾತಾವರಣ, ಆರೋಗ್ಯ, ವ್ಯವಸಾಯ ಮತ್ತು ಶಿಕ್ಷಣ ರಂಗಗಳಲ್ಲಿನ ಸಮಸ್ಯಗಳ ಪರಿಹಾರಕ್ಕೆ ಪ್ರಾರಂಭಿಸುತ್ತಾರೆ ಒಮ್ಮೆ ಇಂತಹ ಅರಿವನ್ನು ಹೆಚ್ಚಿಸಿಕೊಂಡಲ್ಲಿ ಮಿತ್ರರುಗಳ ಗುಂಪು ತಾವು ಅಧ್ಯಯನ ವರ್ತುಲಗಳು, ಕಿರಿಯ ಯುವಕರ ಗುಂಪುಗಳು ಮತ್ತು ಸಮುದಾಯಿಕ ಆರಾಧನೆ ಮುಂತಾದ ಚಟುವಟಿಕೆಗಳನ್ನು ತಮ್ಮ ಸಮುದಾಯದ ಪ್ರಗತಿಗೆ ತಾವು ಗಳಿಸಿಕೊಂಡ ದೂರದೃಷ್ತ್ಟಿಯ ಕಾರ್ಯಗಳಲ್ಲಿ ತೊಡಗುವರು. ಕೆಲವೊಮ್ಮೆ ಕ್ರಮಬಧ್ಧವಲ್ಲದ ಪ್ರಯತ್ನಗಳು ಮತ್ತು ಸೇವಾ ಯೋಜನೆಗಳು ಟ್ಯುಟೋರಿಯಲ್ ಅಥವಾ ಸಮುದಾಯ ಶಾಲೆಗಳಂತಹ ಹೆಚ್ಚು ಕ್ರಮಬಧ್ಧವಾದ ಉಪಕ್ರಮಗಳಾಗುವುವು ಇಂತಹವುಗಳಲ್ಲಿ ಕೆಲವು ಮುಂದಕ್ಕೆ ಬೆಳೆದಂತೆ ಕ್ರಮಬಧ್ಧವಾದ ಹೆಚ್ಚು ಸಂಕೀರ್ಣ ಬೆಳವಣಿಗಾ ಸಂಸ್ಥೆಗಳು ಮತ್ತು ದೊಡ್ಡ ಶೈಕ್ಷಣಿಕ ಶಾಲೆಗಳಾಗಿ ರೂಪುಗೊಳ್ಳುತ್ತವೆ.

ತಮ್ಮ ಕ್ಷೇತ್ರಗಳಲ್ಲಿ ಸಂಕೀರ್ಣತೆಯ ಹಂತ ಮತ್ತು ಪ್ರಯತ್ನಗಳಲ್ಲಿ ಭಿನ್ನತೆಯಿದ್ದರೂ ಇಂತಹ ಸಾಮಾಜಿಕ ಕಾರ್ಯಗಳಲ್ಲಿ ಸಾಮಾನ್ಯವಾದುದು ಎಂದರೆ ಮಾನವತೆಗೆ ಆಧ್ಯಾತ್ಮಿಕ ಮತ್ತು ಭೌತಿಕವಾಗಿ ಬೆಳೆಯುವಂತೆ ಮಾಡುವ ಪ್ರಯತ್ನದ ದೂರದೃಷ್ಟಿ., ಮಾನವ ಜನಾಂಗದಲ್ಲಿನ ಏಕತೆಯ ಒಂದು ನಂಬುಗೆ, ನ್ಯಾಯದ ತತ್ವ ಪಾಲನೆ, ಮತ್ತು ತಮ್ಮದೇ ಸಮುದಾಯದ ಅಭಿವೃಧ್ಧಿಗೆ ಬೇಕಾದ ಜ್ಞಾನದ ಅನ್ವಯಿಸುವಿಕೆ ಮತ್ತು ಇಂತಹ ಚಟುವಟಿಕೆಗಳಲ್ಲಿ ಜನರು ಭಾಗವಹಿಸುವರ ಅವರ ಸಾಮರ್ಥ್ಯದ ಕಡೆಗೆ ಗಮನ ಹರಿಸುವುದು ಮುಖ್ಯವಾದುದು.

Scroll Up