“ದೇವರ ನ್ಯಾಯ ಮಂದಿರದ ಜನರಿಗೆ ಮಾನವರ ವ್ಯವಹಾರಗಳ ಜವಾಬ್ದಾರಿಯನ್ನು ವಹಿಸಿದ್ದಾರೆ. ಅವರು ನಿಜವಾಗಿಯೂ ಆತನ ಸಾಮ್ರಾಜ್ಯಗಳಲ್ಲಿ ಅಧಿಕಾರದ ದಿನಕಾರಂಜಿಗಳು ಮತ್ತು ದೇವರ ಸೇವಕರುಗಳಲ್ಲಿ ದೇವರ ಪಾರುಪತ್ತೆಗಾರರು .”ಬಹಾಉಲ್ಲಾ

ವಿಶ್ವನ್ಯಾಯ ಮಂದಿರವು ಬಹಾಯಿ ಧರ್ಮದ ಅಂತರಾಷ್ಟ್ರೀಯ ಆಡಳಿತ ಮಂಡಳಿ. ಬಹಾಉಲ್ಲಾರವರು ತನ್ನ ನಿಯಮಾವಳಿಯ ಗ್ರಂಥ ಕಿತಾಬ್ - ಇ - ಅಖ್ದಾಸ್ ನಲ್ಲಿ ಈ ಸಂಸ್ಥೆಯ ಸೃಷ್ಟಿಯನ್ನು ವಿಧಾಯಕ ಮಾಡಿದ್ದಾರೆ.

ವಿಶ್ವನ್ಯಾಯ ಮಂದಿರವು ಒಂಭತ್ತು ಮಂದಿ ಚುನಾಯಿತ ಸದಸ್ಯರುಳ್ಳ ಸಂಸ್ಥೆ. ಐದು ವರ್ಷಗಳಿಗೊಮ್ಮೆ ವಿಶ್ವದ ರಾಷ್ಟ್ರೀಯ ಆಧ್ಯಾತ್ಮಿಕ ಸದಸ್ಯ ಸಮುದಾಯದವರಿಂದ ಚುನಾಯಿತಗೊಳ್ಳುತ್ತದೆ. ಧರ್ಮದ ಸ್ಥಾನ ಮಾನ ಮಾನವನ ಗೌರವದ ಕಾಪಾಡುವಿಕೆ, ಶಾಂತಿ ಮತ್ತು ಪ್ರಾಪಂಚಿಕ ಅಭಿವೃಧ್ಧಿ ಮತ್ತು ಶೈಕ್ಷಣಿಕತೆಯ ಬೆಳವಣಿಗೆ ಮುಂತಾದ ಮಾನವ ವ್ಯವಹಾರಗಳ ಮೇಲೆ ಪೂರಕ ಪ್ರಭಾವ ಬೀರುವ ದಿವ್ಯ ಅಧಿಕಾರವನ್ನು ಬಹಾಉಲ್ಲಾರವರು ಈ ವಿಶ್ವನ್ಯಾಯಮಂದಿರಕ್ಕೆ ಕೊಟ್ಟಿದ್ದಾರೆ. ಎಂದೂ ವಿಕಸನಗೊಳ್ಳುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಬಹಾಯಿ ಬೋಧನೆಗಳನ್ನು ಅನ್ವಯಿಸುವುದು ಮತ್ತು ಧರ್ಮದ ಪವಿತ್ರ ಗ್ರಂಥದಲ್ಲಿ ನಿಖರವಾಗಿ ಒಳಗೊಳ್ಳದ ವಿಚಾರಗಳ ಬಗ್ಗೆ ಕಾನೂನುಗಳನ್ನು ತರುವ ಅಧಿಕಾರವನ್ನೂ ಬಹಾಉಲ್ಲಾರವರು ವಿಶ್ವನ್ಯಾಯ ಮಂದಿರಕ್ಕೆ ನೀಡಿದ್ದಾರೆ.

೧೯೬೩ ರಲ್ಲಿ ತನ್ನ ಪ್ರಥಮ ಚುನಾವಣೆಯಾದ ನಂತರ ವಿಶ್ವ ನ್ಯಾಯ ಮಂದಿರವು, ಪ್ರಪಂಚದ ಬಹಾಯಿ ಸಮುದಾಯಗಳಿಗೆ ಒಂದು ಪ್ರಪಂಚಿಕವಾಗಿ ಅಭಿವೃಧ್ಧಿಗೊಳ್ಳುವ ನಾಗರೀಕತೆಯನ್ನು ಕಟ್ಟಲು ಭಾಗವಹಿಸುವ ಸಾಮರ್ಥ್ಯವನ್ನು ಪಡೆಯುವತ್ತ ಮಾರ್ಗದರ್ಶನವನ್ನು ನೀಡಿತು. ವಿಶ್ವ ನ್ಯಾಯ ಮಂದಿರವು ತೋರಿದ ಮಾರ್ಗದರ್ಶನದಿಂದಾಗಿ ಬಹಾಯಿ ಸಮುದಾಯಗಳಲ್ಲಿ ಸಮಾನ ಐಕ್ಯತೆ ಮತ್ತು ಕೃತ್ಯಗಳನ್ನು ಕಾಯ್ದುಕೊಳ್ಳುತ್ತಾ ಬಹಾಉಲ್ಲಾರವರ ಪ್ರಪಂಚ ಶಾಂತಿಯ ದೂರದೃಷ್ಟಿಯನ್ನು ಅನುಷ್ಟಾನಗೊಳಿಸುವಂತೆ ನೋಡಿಕೊಳ್ಳುತ್ತದೆ.

Exploring this topic:

A Unique Institution

Development of the Bahá’í Community Since 1963

The Seat of the Universal House of Justice

Quotations

Articles and Resources