“ಮಾನವನ ಹಿರಿಮೆ ಇರುವುದು ಆತನ ಸೇವೆ ಮತ್ತು ಗುಣದಲ್ಲಿ ತನ್ನ ಐಶ್ವರ್ಯ ಮತ್ತು ಸಿರಿತನದ ಪ್ರದರ್ಶನ ದಿಂದಲ್ಲ.”ಬಹಾಉಲ್ಲಾ

ಪ್ರಪಂಚದಾದ್ಯಂತ ಬಹಾಯಿ ಸಮುದಾಯಗಳು ತೊಡಗಿಸಿಕೊಂಡ ಹಲವಾರು ಸಮುದಾಯ ಕಟ್ಟುವ ಕಾರ್ಯಗಳಲ್ಲಿ ವಿದ್ಯೆಯ ವಿಕೇಂದ್ರೀಕರಣದ ಕ್ರಮಗಳು, ಇದು ಯುವಕರ ಮತ್ತು ವಯಸ್ಕರ ಪ್ರಯತ್ನಗಳಿಂದ ಒಂದು ಅಭಿವೃಧ್ಧಿ ಶೀಲ ಮತ್ತು ಚೈತನ್ಯ ಭರಿತ ಸಮುದಾಯವನ್ನು ಕಟ್ಟಲು ತೊಡಗಿಸಿಕೊಳ್ಳುವರು ವಿದ್ಯಾ ಕ್ರಮಗಳನ್ನು ಸಣ್ಣ ಗುಂಪಿನೊಡನೆ ಅಧ್ಯಯನ ವರ್ತುಲಗಳ ಮೂಲಕ ನೀಡುವರು. ಈ ಅಧ್ಯಯನ ವರ್ತುಲಗಳ ಪಾಠ ಪಟ್ಟಿಯು ದೇವರ ನುಡಿಗಳ ಆಧಾರದ ಮೇಲೆ, ಬೌಧ್ಧಿಕ, ನೈತಿಕ ಆಧ್ಯತ್ತ್ಮಿಕ ಮತ್ತು ಪ್ರಾತ್ಯಕ್ಷಿಕ ಸಾಮರ್ಥ್ಯವನ್ನು ಹೆಚ್ಚಿಸಲು ಎಲ್ಲ ಹಿನ್ನೆಲೆಯ ಜನರಿಗೆ ಸಹಾಯ ಮಾಡುವುದು. ಅದು ಹಲವಾರು ವಿವಿಧ ಪಾಠಗಳನ್ನು ಒಳ್ಗೊಂಡಿರುತ್ತದೆ ಅದರ ಮುಖ್ಯ ಗುರಿ ಸಮುದಾಯದಲ್ಲಿ ವಿವಿಧ ಸೇವೆಯನ್ನು ಅಂದರೆ ಮಕ್ಕಳಿಗೆ ಬೋಧಿಸುವುದು, ಭಕ್ತ್ಯಾತ್ಮಕ ಸಭೆಗಳನ್ನು ನಡೆಸಿ ಕೊಡುವುದು ಮತ್ತು ಅಧ್ಯಯನ ವರ್ತುಲಗಳಲ್ಲಿ ತಿಳಿಸಿಕೊಡುವುದೇ ಆಗಿರುವುದು

ಈ ಕಾರ್ಯಕ್ರಮದಲ್ಲಿ ಒಂದು ಕ್ರಮಪ್ರಕಾರದ ಅಧ್ಯಯನ ಪ್ರಕ್ರಿಯೆಯನ್ನು ತರಬೇತಿ ಸಂಸ್ಥೆ ಯೆಂದು ಕರೆಯುತ್ತಾರೆ, ಇದರ ಕಾರ್ಯಕ್ರಮಗಳನ್ನು ಹೊಂದಿಸಿಕೊಳ್ಳಬಹುದಾದ ಸೇವಾಪಥದತ್ತ ಸಾಗಿಸುತ್ತದೆ. ಈ ಕಾರ್ಯಕಮದಲ್ಲಿ ಸುಮಾಜದ ಜನರು ದೇವರ ನುಡಿಗಳನ್ನು ಮನನ ಮಾಡಿಕೊಳ್ಳುತ್ತಾರೆ ಮತ್ತು ಅದು ತಮ್ಮ ಜೀವನ ಮತ್ತು ಸಮಾಜದ ಮೇಲೆ ಹೇಗೆ ಅನ್ವಯಿಸಬಹುದು ಎಂದು ಮತ್ತು ತಮ್ಮ ಸಮುದಾಯವನ್ನು ಉತ್ತಮವಾಗಿರಿಸುವಲ್ಲಿ ಆ ತತ್ವಗಳ ಅನ್ವಯದ ಬಗ್ಗೆ ಒಟ್ಟಿಗೆ ಕೆಲಸ ಮಾಡುವರು

Scroll Up