ಹತ್ತೊಂಭತ್ತನೇ ಶತಮಾನದ ಮಧ್ಯ ಭಾಗದಲ್ಲಿ – ಪ್ರಪಂಚದ ಚರಿತ್ರೆಯಲ್ಲಿನ ಮಹಾ ವಿಕ್ಷುಬ್ಧ ಪರಿಸ್ಥಿತಿಯಲ್ಲಿ – ಒಬ್ಬ ಯುವ ವ್ಯಾಪಾರಿಯು, ತಾನು ಮಾನವತೆಯ ಬಾಳನ್ನು ಬದಲಾಯಿಸುವ ಗುರಿಯ ಸಂದೇಶದೊಂದಿಗೆ ಬಂದವನು ಎಂದು ಘೋಷಿಸಿಕೊಂಡನು. ಅವನ ದೇಶ – ಇರಾನ್ – ಅಲ್ಲಿ ಆ ಕಾಲದಲ್ಲಿ ನೈತಿಕತೆಯೇ ಮುರಿದು ಬಿದ್ದಿತ್ತು, ಆತನ ಸಂದೇಶವು ಎಲ್ಲ ಸ್ತರದ ಜನರಲ್ಲಿ ಕುತೂಹಲವನ್ನು ಕೆರಳಿಸಿತು ಮತ್ತು ಭರವಸೆಯನ್ನು ತಂದುಕೊಟ್ಟಿತು, ಕೂಡಲೇ ಸಾವಿರಾರು ಜನರು ಅವರ ಅನುಯಾಯಿಗಳಾದರು. ಅವರು ತನ್ನನ್ನು ತಾನೇ ದ ಬಾಬ್ – ಎಂದು ಕರೆದು ಕೊಂಡರು – ಅಂದರೆ ಅರೆಬಿಕ್ ಭಾಷೆಯಲ್ಲಿ ಬಾಗಿಲು ಎಂದು ಅರ್ಥ
ಅವರು ಆಧ್ಯಾತ್ಮಿಕ ಮತ್ತು ನೈತಿಕ ಬದಲಾವಣೆಗಾಗಿ ಕರೆಯನ್ನು ಕೊಟ್ಟರು,ಮಹಿಳೆಯರ ಸ್ಥಾನ ಮಾನದ ಮತ್ತು ಹಲವು ಜನ ಬಡವರ ಸ್ಥಿತಿಗತಿಗಳ ಬದಲಾವಣೆಗೆ ಅವರ ಪರಿಹಾರೋಪಾಯಗಳು ಆಧ್ಯಾತ್ಮಿಕ ಬದಲಾವಣೆಯಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಅದೆ ವೇಳೆ ಅವರು , ತನ್ನದೇ ಆದ ಒಂದು ವ್ಯಯಕ್ತಿಕ ರ್ನಿದಿಷ್ಟ ಸ್ವತಂತ್ರ ಧರ್ಮವನ್ನೇ ಹುಟ್ಟುಹಾಕಿದರು.ಇದರಿಂದ ಅವರ ಅನುಯಾಯಿಗಳು ತಮ್ಮ ಜೀವನದ ಗತಿಯಲ್ಲೇ ಬದಲಾವಣೆಯನ್ನು ತಂದುಕೊಂಡು ಬಹು ಧೀರೋಧಾತ್ತ ಕೃತ್ಯಗಳನ್ನು ಎಸಗಿದರು.
ಮಾನವ ಜನಾಂಗವು ಒಂದು ಹೊಸ ಕಾಲ ವರ್ತುಲದಲ್ಲಿ ನಿಂತಿದೆ ಎಂದು ಬಾಬ್ ರವರು ಘೋಷಿಸಿಕೊಂಡರು. ಅವರ ಕಾರ್ಯೋದ್ದೇಶ – ಬರಿಯ ಆರು ವರ್ಷಕ್ಕೆ ಮಾತ್ರ ಸೀಮಿತವಾಗಿತ್ತು – ಮುಂದೆ ಬರುವ ಮಹಾ ಅವತಾರಪುರುಷನ ಆಗಮನಕ್ಕೆ ದಾರಿಯನ್ನು ತಯಾರು ಮಾಡುವುದೇ ಆಗಿತ್ತು, ಆ ಮುಂದಿನ ಅವತಾರವು ನ್ಯಾಯ ಮತ್ತು ಶಾಂತಿಯನ್ನು, ಹಿಂದಿನ ಎಲ್ಲಾ ಧರ್ಮಗಳು ಘೋಷಿಸಿದ್ದಂತೆ – ಬಹಾಉಲ್ಲಾರವರ ಆಗಮನದ ಕುರಿತೇ ಆಗಿತ್ತು.