ಇಪ್ಪತ್ತನೆ ಶತಮಾನದ ಆದಿಭಾಗದಲ್ಲಿ ಬಹಾಉಲ್ಲಾರವರ ಹಿರಿಯ ಮಗ ಅಬ್ದುಲ್-ಬಹಾ ಬಹಾಯಿಧರ್ಮದ ಪ್ರಮುಖ ವಕ್ತಾರ, ಸಾಮಾಜಿಕ ನ್ಯಾಯದ ಹೆಸರಾಂತ ವೀರಾಗ್ರಣಿ ಮತ್ತು ಅಂತರ್ರಾಷ್ಟ್ರೀಯ ಶಾಂತಿಯ ರಾಯಭಾರಿ.
ಆತನ ಬೋಧನೆಗಳ ಮೂಲಭೂತ ತತ್ವವಾದ ಐಕ್ಯತೆಯನ್ನು ಎತ್ತಿಹಿಡಿಯುತ್ತಾ, ಬಹಾಉಲ್ಲಾರವರು ತನ್ನ ಧರ್ಮವು ಹಿಂದಿನ ಧರ್ಮಗಳ ಪ್ರವರ್ತಕರ ಮರಣಾ ನಂತರ ಒಡೆದು ಹೋದಂತಾಗಬಾರದೆಂದು ಸಂರಕ್ಷಿಸುವ ಅಗತ್ಯವನ್ನು ಮನಗಂಡು ಸೂಕ್ತ ಮಾರ್ಗವನ್ನು ಅನುಸರಿಸಿದರು. ಆತನ ಬರಹಗಳಲ್ಲಿ ಆತನು ತನ್ನ ಕಾಲನಂತರ ಎಲ್ಲರೂ ತನ್ನ ಹಿರಿಯ ಪುತ್ರ ಅಬ್ದುಲ್-ಬಹಾರತ್ತ ತಿರುಗಬೇಕೆಂದೂ ಆತನು ತನ್ನ ಬರಹಗಳ ವ್ಯಾಖ್ಯಾನಕಾರನೆಂದೂ ಅಲ್ಲದೆ ತನ್ನ ಧರ್ಮದ ಚೈತನ್ಯ ಮತ್ತು ಬೋಧನೆಗಳ ಪರಿಪೂರ್ಣ ಮಾದರಿ ಅನುಯಾಯಿ ಎಂದು ತಿಳಿಸಿದರು.
ಬಹಾಉಲ್ಲಾರ ಮರಣಾ ನಂತರ ಅಬ್ದುಲ್ ಬಹಾರವರ ಅತಿವಿಶೇಷ ಗುಣಗಳ ಮಟ್ಟ, ಅವರ ಜ್ಞಾನ ಮತ್ತು ಮಾನವ ಜನಾಂಗಕ್ಕೆ ಅವರ ಸೇವೆ, ಬಹಾಉಲ್ಲಾರವರ ಬೋಧನೆಗಳನ್ನು ಕಾರ್ಯಕ್ಕೆ ತರುವಲ್ಲಿ ವಿವಿಧ ರೀತಿಯಲ್ಲಿ ಪ್ರಾತ್ಯಕ್ಷೀಕರಿಸಿದರು, ಮತ್ತು ಪ್ರಪಂಪಚಾದ್ಯಂತ ಬಹು ವೇಗವಾಗಿ ಪಸರಿಸುವ ಸಮುದಾಯಕ್ಕೆ ಮಹಾ ಪ್ರತಿಷ್ಟೆಯನ್ನು ತಂದುಕೊಟ್ಟಿತು.
ಅಬ್ದುಲ್ ಬಹಾರವರು ತನ್ನ ಕಾರ್ಯಾಚರಣೆಯನ್ನು ತಮ್ಮ ತಂದೆಯವರ ಧರ್ಮವನ್ನು ಮುಂದುವರಿಸುವತ್ತ ಮತ್ತು ಶಾಂತಿ ಮತ್ತು ಐಕ್ಯತೆಯ ವಿಚಾರಗಳನ್ನು ಅಭಿವೃಧ್ಧಿಗೊಳಿಸುವತ್ತ ಮುಡುಪಾಗಿಟ್ಟರು. ಅವರು ಸ್ಥಳೀಯ ಬಹಾಯಿ ಆಧ್ಯಾತ್ಮಿಕ ಸಭೆಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡಿದರು, ಮತ್ತು ಪ್ರಾರಂಭಿಕ ಹಂತದಲ್ಲಿರುವ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಚಟುವಟಿಕೆಗಳ ತೊಡಗುವಿಕೆಗೆ ಮಾರ್ಗದರ್ಶನಗಳನ್ನು ನೀಡಿದರು. ಅವರು ತಮ್ಮ ಜೀವಾವಧಿಯ ಶಿಕ್ಷೆಯಿಂದ ಬಿಡುಗೊಂಡಾಗ ಅಬ್ದುಲ್ ಬಹಾರವರು ಹಲವು ವಿದೇಶಿ ಪ್ರಯಾಣಕ್ಕೆ ಹೊರಟರು, ಅದು ಅವರನ್ನು ಈಜಿಪ್ಟ್, ಯುರೋಪ್ ಮತ್ತು ಉತ್ತರ ಅಮೇರಿಕಾಗೆ ಕರೆದುಕೊಂಡು ಹೋಯಿತು. ಅವರ ಜೀವನ ಪರ್ಯಂತ ಅವರು ಬಹಾಉಲ್ಲಾರವರ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪುನರುಜ್ಜೀವನಕ್ಕೆ ಬಡವ ಸಿರಿವಂತರೆಲ್ಲರಾದಿಯಾಗಿ ಅತ್ಯಂತ ಸರಳತೆಯನ್ನು ತೋರಿದರು.
Exploring this topic:
- The Life of ‘Abdu’l-Bahá
- The Significance of ‘Abdu’l-Bahá
- The Development of the Bahá’í Community in the time of ‘Abdu’l-Bahá
- Quotations
- Articles and Resources