ಒಂದು ಸಂಯುಕ್ತ ಪ್ರಪಂಚವನ್ನು ಸೃಷ್ಟಿಸುವ ಉದ್ದೇಶವನ್ನು ಸಾಧಿಸುವ ಆತನ ಪ್ರಕಟಣೆಯನ್ನು ಪ್ರಾಮಾಣಿಕರಿಸಲು ಮತ್ತು ಬಹಾಯಿ ಸಮುದಾಯದಲ್ಲಿ ಐಕ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಬಹಾಉಲ್ಲಾರವರು ತನ್ನ ಹಿರಿಯ ಮಗ ಅಬ್ದುಲ್ ಬಹಾ ರವರನ್ನು ತನ್ನ ಒಡಂಬಡಿಕೆಯ ಕೇಂದ್ರ ವನ್ನಾಗಿ ನೇಮಕ ಮಾಡಿ ವಿಶ್ವ ನ್ಯಾಯ ಮಂದಿರದ ಸ್ಥಾಪನೆಯನ್ನು ವಿಧಾಯಕ ಮಾಡಿದರು. ಅದರ ಮುಂದುವರಿಕೆಯಾಗಿ ವಿಶ್ವನ್ಯಾಯ ಮಂದಿರದ ಕೆಲಸ ಕಾರ್ಯಗಳಿಗೆ ನಿಯಮಾವಳಿಗಳನ್ನು ಸ್ಥಾಪಿಸಿದರು, ಮತ್ತು ಅವರ ಕಾಲಾ ನಂತರ ಬಹಾಯಿಗಳೆಲ್ಲರೂ ಅವರ ಹಿರಿಯ ಮೊಮ್ಮಗ ಷೋಘಿ ಎಫೆಂಡಿಯವರತ್ತ ತಿರುಗಬೇಕು, ಅವರನ್ನು ಬಹಾಯಿ ಧರ್ಮದ ರಕ್ಷಕನೆಂದು ನೇಮಕ ಮಾಡಿದರು.
ವಿಶ್ವ ನ್ಯಾಯ ಮಂದಿರ ಮತ್ತು ಧರ್ಮ ರಕ್ಷಕರಿಗೆ ಬಹಾಯಿ ತತ್ವಗಳ ಅನುಷ್ಟಾನ, ಅದರ ನಿಯಮಗಳ ಅನುಷ್ಟಾನ, ಧರ್ಮದ ಸಂಸ್ಥೆಗಳ ರಕ್ಷಣೆ ಮತ್ತೆ ಎಂದೂ ಬೆಳೆಯುತ್ತಿರುವ ಸಮಾಜಕ್ಕೆ ಧರ್ಮದ ಅಳವಡಿಕೆಯನ್ನು ಮಾಡ ಬೇಕಾದ ಜವಾಬ್ದಾರಿಯನ್ನು ವಹಿಸಲಾಗಿದೆ.
೩೬ ವರ್ಷಗಳ ಪರ್ಯಂತ ವಿಶೇಷ ದೂರದೃಷ್ಟಿಯಿಂದ ಕೂಡಿ, ವಿವೇಕ ಮತ್ತು ಭಕ್ತಿಯೊಡನೆ ಷೋಘಿ ಎಫೆಂಡಿಯವರು ಕ್ರಮಬಧ್ಧವಾಗಿ ಬೆಳವಣಿಗೆಯನ್ನು ಪೋಷಿಸಿದರು ಮಾನವ ಜನಾಂಗದಲ್ಲಿ ವೈವಿಧ್ಯತೆಯ ಪ್ರಭಾವಗಳು ಬೆಳೆದಂತೆ ಬಹಾಯಿ ಸಮುದಾಯದಲ್ಲಿ ಐಕ್ಯತೆಯನ್ನು ಬಲಪಡಿಸಿದರು.
ಷೋಘಿ ಎಫೆಂಡಿಯವರ ಮಾರ್ಗ ದರ್ಶನದಲ್ಲಿ , ಬಹಾಉಲ್ಲಾರವರು ನಿರ್ಮಿಸಿದ ಆಡಳಿತಾತ್ಮಕ ಕಾರ್ಯಗಳು ಪ್ರಪಂಚದಾದ್ಯಂತ ತ್ವರಿತವಾಗಿ ವಿಕಸನಗೊಳ್ಳುತ್ತಿತ್ತು. ಅವರು ಬಹಾಯಿ ಗ್ರಂಥಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದರು ಧರ್ಮದ ಆಧ್ಯಾತ್ಮಿಕ ಮತ್ತು ಆಡಳಿತಾತ್ಮಕ ಕೇಂದ್ರಗಳನ್ನು ಪವಿತ್ರ ಭೂಮಿಯಲ್ಲಿ ಅಭಿವೃಧ್ಧಿಗೊಳಿಸಿದರು ಮತ್ತು ತಮ್ಮ ಸಾವಿರಾರು ಪತ್ರಗಳಲ್ಲಿ ನಾಗರಿಕತೆಗೆ ಆಧ್ಯಾತ್ಮಿಕ ಪ್ರಕಿಯೆಯ ದೂರದೃಷ್ಟಿಯನ್ನು ತೋರಿಕೊಟ್ಟರು ಮತ್ತು ಸಮಾಜಿಕ ಬದಲಾವಣೆಯ ಪ್ರಚಂಡತೆಗಳನ್ನು ಮುಂದೆ ಸಾಗುತ್ತಿರುವ ಮಾನವ ಜನಾಂಗದ ಭವಿಷ್ಯದತ್ತ ತೋರಿ ಪ್ರೋತ್ಸಾಹದಾಯಕ ದೂರ ದೃಷ್ಟಿಯನ್ನು ವಿಶಾಲಗೊಳಿಸಿದರು.
Exploring this topic:
- The Life and Work of Shoghi Effendi
- Guidance and Translations
- Shoghi Effendi’s Passing
- Quotations
- Articles and Resources