“ನಾನು ಉಳಿದವರಂತೆಯೇ ಇದ್ದೆ, ಒಂದು ದಿನ ಮಲಗಿರುವಾಗ ಸರ್ವ ದಯಾಮಯನ ತಂಗಾಳಿಯು ನನ್ನ ಮೇಲೆ ಬೀಸಿ ಹೋಯಿತು, ಮತ್ತು ಎಲ್ಲಾ ಜ್ಞಾನವನ್ನು ನನಗೆ ತಿಳಿಸಿಕೊಡಲಾಯಿತು. ಇದು ನನ್ನಿಂದ ಅಲ್ಲ, ಆದರೆ ಆ ಸರ್ವ ಶಕ್ತ ಮತ್ತು ಸರ್ವ ಜ್ಞಾನಿಯಾದ ಆ ಭಗವಂತನದು......ಆತನ ಸರ್ವೋದ್ಯುಕ್ತ ವಿಧಾಯಕವು ನನ್ನನ್ನು ತಲಪಿತು, ಮತ್ತು ನನ್ನನ್ನು ಮಾನವರ ಮಧ್ಯೆ ಆತನ ಹೊಗಳಿಕೆಯನ್ನು ಮಾಡುವಂತೆ ಮಾಡಿತು.”


ಬಹಾಉಲ್ಲಾ

ಮಾನವತೆಯ ಜೀವನದಲ್ಲಿ ಹತ್ತೊಂಬತ್ತನೇ ಶತಮಾನವು ನವ ಚೇತರಿಕೆಯನ್ನು ಕಂಡ ಕಾಲ.ಯುರೋಪ್ನಾದ್ಯಂತ, ಲ್ಯಾಟಿನ್ ಅಮೇರಿಕ , ಚೈನಾ, ಭಾರತ ಮತ್ತು ಉತ್ತರ ಅಮೇರಿಕ, ಒಂದರ ನಂತರ ಒಂದರಂತೆ ಜನರು ತಮ್ಮ ದಮನಕಾರಿ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಕಿತ್ತು ಬಿಸಾಡಲು ಸಿಡಿದೆದ್ದರು. ಮಾನವ ಪ್ರಜ್ಞೆಯು ದೀರ್ಘ ಕಾಲಿಕ ಶುಷುಪ್ತಾವಸ್ಥೆಯಿಂದ ಮತ್ತು ಶರಣಾಗತ ಭಾವದಿಂದ ಎಚ್ಚೆತ್ತು ಮೇಲೆದ್ದಂತೆ ಕಂಡು ಬಂತು.

ಎಲ್ಲೆಲ್ಲೂ, ನ್ಯಾಯ ಸಮಾನತೆ ಮತ್ತು ಮಾನವನ ಔನ್ನತ್ಯದಿಂದ ಕೂಡಿದ ಸಾಮಾಜಿಕ ಬದಲಾವಣೆಗಾಗಿ ಮೊರೆಯಿಡುವಿಕೆ ಕಂಡುಬರುತ್ತಿತ್ತು.. ಒಂದು ಮಹಾ ಯುಗದ ಕಾಲವು ಸನ್ನಿಹಿತವಾಗಿದೆ ಎಂಬ ಭಾವವನ್ನು ಆ ಕಾಲದ ಕವಿಗಳು ತಮ್ಮ ಪದಗಳಲ್ಲಿ ಬಿಂಬಿಸುತ್ತಿದ್ದರು. ಶ್ರೀ ರವೀಂದ್ರನಾಥ ಠಾಗೋರ್ ರವರು ಈ ರೀತಿ ಬರೆದರು: “ಈ ಕಾಲದಲ್ಲಿ ಪ್ರತಿಯೊಬ್ಬರಿಗೂ ಒಂದು ಕರೆಯು ಬಂದಿದೆ, ತನ್ನನ್ನೂ ತನ್ನ ಪರಿಸರವನ್ನೂ ಮಾನವನು ತನ್ನ ಆತ್ಮವು ಎಲ್ಲ ಮಾನವರ ಆಧ್ಯಾತ್ಮಿಕ ಐಕ್ಯತೆಯನ್ನು ಕಂಡುಕೊಳ್ಳುವ ಕಾಲವನ್ನು ಎದುರುಗೊಳ್ಳುವ ಕಾಲವು ಇದೇ ಆಗಿದೆ.”

ಇಂತಹ ಸಂದರ್ಭದಲ್ಲಿ, ಪ್ರಪಂಚದ ಹೆಚ್ಚಿನವರಿಗೆ ಅಪರಿಚಿತವಾಗಿದ್ದ ಇರಾನ್ ದೇಶದಲ್ಲಿ, ದೇವರ ಹೊಸ ಬೆಳಕು, ಮಾನವತೆಯು ಪಕ್ವತೆಗೆ ಬರುವ ಕಾಲಕ್ಕಾಗಿ ದೇವರ ಅವತಾರ ಬಹಾಉಲ್ಲಾರವರ ಆಗಮನವು ಆಗಿದೆ. ಬಹಾಉಲ್ಲಾರವರು ದೇವರು ಒಬ್ಬನೆ, ಎಲ್ಲಾ ಧರ್ಮಗಳು ಬಂದಿರುವುದು ಒಬ್ಬನೇ ದೇವನಿಂದ ಮತ್ತು ಅದು ಸಾರಸತ್ವದಲ್ಲಿ ಒಂದೇ ಮತ್ತು ಈಗ ಮಾನವ ಜನಾಂಗದ ಐಕ್ಯತೆಗೆ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿಕೊಟ್ಟರು.

ಬಹಾಉಲ್ಲಾರವರ ಜೀವನವು ಇತರ ಮಹಾ ಧರ್ಮಗಳ ಸ್ಥಾಪಕರ ಭೌತಿಕ ಜೀವನ ಕ್ರಮದಂತೆ ಮಹೋನ್ನತ ಗುಣ ವಿಶೇಷತೆ ಮತ್ತು ವಿಭಿನ್ನತೆಯಿಂದ ಕೂಡಿತ್ತು. ಇರಾನ್ ನಲ್ಲಿ ೧೮೧೭ ರಲ್ಲಿ ಒಂದು ಕುಲೀನ ಕುಟುಂಬದಲ್ಲ್ಲಿ ಜನಿಸಿದ್ದು, ಚಿಕ್ಕಂದಿನಿಂದಲೇ ಬಹಾಉಲ್ಲಾರವರು ಅಸಾಮಾನ್ಯ ವಿವೇಕ ದಯೆ, ಧಾರಾಳತನ ಮತ್ತು ಅಸದಳ ನ್ಯಾಯಪರತೆಯಿಂದ ಕೂಡಿದ್ದರು. ತಮ್ಮ ತಂದೆಯ ಕಾಲಾ ನಂತರ, ರಾಜನ ಆಸ್ಥಾನದಲ್ಲಿ ಒಂದು ಉನ್ನತ ಹುದ್ದೆಯನ್ನು ಅವರಿಗೆ ಕೊಡಮಾಡಲಾಗಿತ್ತು, ಅದನ್ನು ಅವರು ವಿನಯದಿಂದಲೇ ತಿರಸ್ಕರಿಸಿದರು ಮತ್ತು ಅದರ ಬದಲು ಅವರು ತಮ್ಮ ಜೀವನವನ್ನು ದಮನಕ್ಕೊಳಗಾದವರಿಗೆ ಸಹಾಯ ಮಾಡಲು , ರೋಗಿಗಳ ಆರೈಕೆಗೆ ಮತ್ತು ಬಡವರಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟರು.

ಹತ್ತೊಂಭತ್ತನೇ ಶತಮಾನದ ಮಧ್ಯ ಭಾಗದಲ್ಲಿ ಬಹಾಉಲ್ಲಾರವರು ತಮ್ಮ ಕಾರ್ಯೋದ್ದೇಶವಾಗಿ ಒಂದು ಹೊಸ ಧರ್ಮದ ಸ್ಥಾಪಕ ಪ್ರವಾದಿಯಾಗಿ ಘೋಷಿಸಿಕೊಂಡಾಗ , ಅವರ ಬೋಧನೆಗಳು ಹೊಸತರದಲ್ಲಿ ಅದು ಕ್ರಾಂತಿಕಾರಿಯಾಗಿ ಕಂಡು ಬಂದಿತು. ಅವರ ಮುಖ್ಯ ತತ್ವಗಳು - ಮಾನವ ಜನಾಂಗವು ಏಕತ್ವವನ್ನು ಸಾಧಿಸಲು ಕಾಲವು ಪಕ್ವವಾಗಿದೆ - ಇದರ ಜೊತೆಗೆ ಹಲವಾರು ಸಮಾಜಿಕ ಬೋಧನೆಗಳನ್ನು ಕೊಟ್ಟರು - ಅದರಲ್ಲಿ ಸ್ತ್ರೀ ಪುರುಷರ ಸಮಾನತೆ, ಧರ್ಮ ಮತ್ತು ವಿಜ್ಞಾನಗಳಲ್ಲಿನ ಸೌಹಾರ್ಧತೆ, ಸ್ವತಂತ್ರ ಸತ್ಯಾನ್ವೇಷಣೆ, ಪೂಜಾರಿಗಳ ವರ್ಜ್ಯ, ಯಾವುದೇ ತರದ ಪೂರ್ವಾಗ್ರಹಗಳನ್ನು ತೊರೆಯುವುದು ಮತ್ತು ಸಾರ್ವತ್ರಿಕ ಶಿಕ್ಷಣ ಇವುಗಳೂ ಒಳಗೊಂಡಿದೆ.

ಆವರ ಬೋಧನೆಗಳಿಗೆ ಮಧ್ಯ ಕಾಲೀನ ಯುಗದ ಆಗಿನ ರಾಜಕೀಯ ಮತ್ತು ಧಾರ್ಮಿಕ ಮುಖಂಡರಿಂದ ಚಂಡ ಮಾರುತದ ತರದ ವಿರೋಧವು ಪ್ರಾಪ್ತವಾಯಿತು. ಇರಾನ್ ದೇಶ ಶಿಯಾ ಗುಂಪಿನ ಧಾರ್ಮಿಕ ಮುಖಂಡರು - ಎರಡು ಬಲಶಾಲಿ ಸಾಮ್ರಾಜ್ಯದೊಡನೆ - ಅಂದರೆ ಇರಾನ್ ನ ದೊರೆ ಮತ್ತು ಒಟ್ಟೋಮನ್ ಸಾಮ್ರಾಜ್ಯ - ಇವರು ಅವರ ಪ್ರಭಾವವನ್ನು ಕುಗ್ಗಿಸಲು ತಮ್ಮಿಂದ ಸಾಧ್ಯವಾದುದನ್ನೆಲ್ಲವನ್ನೂ ಮಾಡಿದರು. ಬಹಾಉಲ್ಲಾರವರ ಎಲ್ಲಾ ಐಶ್ವರ್ಯವನ್ನು ಮುಟ್ಟಗೋಲು ಹಾಕಲಾಯಿತು, ಅವರಿಗೆ ಚಿತ್ರ ಹಿಂಸೆಯನ್ನು ನೀಡಲಾಯಿತು, ಹೊಡೆಯಲಾಯಿತು ಸಂಕೋಲೆಗಳನ್ನು ತೊಡಿಸಿ ಬಂಧನದಲ್ಲಿರಿಸಲಾಯಿತು, ಮತ್ತು ನಾಲ್ಕು ಬಾರಿ ದೇಶದಿಂದ ದೇಶಕ್ಕೆ ಗಡಿಪಾರು ಮಾಡಲಾದಾಗ ಅವರು ಒಟ್ಟೊಮನ್ ಸಾಮ್ರಾಜ್ಯದ ಖೈದಿಗಳ ವಸಾಹತಾದ ಅಕ್ಕ್ರ [ಇಸ್ರೇಲ್ ದೇಶದ ಈಗಿನ ಅಕ್ಕಾ] ದಲ್ಲಿ ೧೮೯೨ ರಲ್ಲಿ ಕಾಲವಾದರು.

ಬಹಾಉಲ್ಲಾರವರು ತನ್ನ ಅತಿ ದುರ್ಗಮ ಪರಿಸ್ಥಿಯಲ್ಲೂ ತನ್ನ ಕಾರ್ಯೋದ್ದೇಶವನ್ನು ಮುಂದುವರಿಸುತ್ತಾ ನೂರಾರು ಸಂಪುಟಗಳ ಪವಿತ್ರ ಬರಹಗಳನ್ನು ಮಾನವ ಜನಾಂಗದ ಮಾರ್ಗದರ್ಶನಕ್ಕೆಂದು ಪ್ರಕಟಿಸಿದ್ದಾರೆ. ಅವರಿಗೆ ಸಾರ್ವಭೌಮತೆಯಲ್ಲಿ ಮಾನವ ಜನಾಂಗವು ಎಷ್ಟೇ ನೋವು ಮತ್ತು ಬಲಿದಾನಗಳು ಬಂದರೂ ಮತ್ತೆ ಎದ್ದು ನಿಲ್ಲುವಂತೆ ಮಾಡುವ ಮತ್ತು ಮಾನವ ಜನಾಂಗದ ನೈಜ ಗುರಿಯನ್ನು ತರುವಂತೆ ಪೂರಕ ಭಾವಗಳ ಬೀಜವನ್ನು ಬಿತ್ತುವ ಅವರ ಪ್ರಯತ್ನಗಳನ್ನು ಯಾರಿಂದಲೂ ತಡೆಹಿಡಿಯ ಲಾಗಲಿಲ್ಲ, ಬಹಾಉಲ್ಲಾರವರ ಜೀವಿತ ಕಾಲದಲ್ಲಿ ಅವರ ವಿರೋಧಿಗಳ ವಿರೋಧದ ನಡುವೆಯೂ ಅವರ ಪ್ರಭಾವವು ಬೆಳೆಯುತ್ತಲೇ ಇತ್ತು. ಎಲ್ಲೆಲ್ಲಿಗೆ ಅವರನ್ನು ಗಡಿಪಾರು ಮಾಡಿದರೂ ಸಾವಿರಾರು ಜನರು ಅವರ ಬೋಧನೆಗಳಿಗೆ ಮತ್ತು ಅವರ ಪ್ರೀತಿ, ಶಕ್ತಿ ಮತ್ತು ಅವರ ವ್ಯಕ್ತಿತ್ವದ ವೈಭವಕ್ಕೆ ಆಕರ್ಷಿತರಾಗುತ್ತಿದ್ದರು. ಇಂದು ಅವರ ಬೋಧನೆಗಳು ಪ್ರಪಂಚಾದಾದ್ಯಂತ ಎಲ್ಲಾ ಮೂಲೆಗಳಲ್ಲು ಆರು ಮಿಲಿಯನ್ ಅನುಯಾಯಿಗಳಿಗಿಂತಲೂ ಅಧಿಕ ಮತ್ತು ಇತರ ಮಿಲಿಯ ಗಟ್ಟಲೆ ಜನರು ಅವರ ಜೀವನ ಮತ್ತು ನುಡಿಗಳಿಂದ ಜಗದೈಕ್ಯವನ್ನು ಸಾಧಿಸಲು ಸ್ಪೂರ್ತಿ ಪಡೆಯುತ್ತಿದ್ದಾರೆ.

ಕೇಂಬ್ರಿಜ್ ನ ಪಂಡಿತ ಎಡ್ವರ್ಡ್ ಗ್ರಾನ್ವಿಲೆ ಬ್ರೌನ್ ರವರು ಬಹಾಉಲ್ಲಾರವರು ಕಾಲವಾಗುವ ಸ್ವಲ್ಪ ಕಾಲದ ಮುಂಚೆ ಅವರನ್ನು ಭೇಟಿಯಾಗಿದ್ದರು. ಮುಂದಿನ ಪೀಳಿಗೆಗಾಗಿ ಅವರು ಆ ಹೃದಯಸ್ಪರ್ಷೀ ಘಟನೆಯ ಬಗ್ಗೆ ಹೀಗೆ ಬರೆದಿದ್ದಾರೆ: “ನಾನು ದಿಟ್ಟಿಸಿದ ಅವರ ಮುಖವನ್ನು ನಾನೆಂದೂ ಮರೆಯಲಾರೆ ಆದರೆ ಅದನ್ನು ನನ್ನಿಂದ ವಿವರಿಸಲು ಸಾಧ್ಯವಿಲ್ಲ. ಆ ಇರಿಯುವ ಕಣ್ಣುಗಳು ಪ್ರತಿಯೊಂದು ಆತ್ಮವನ್ನು ಓದುವ ತೆರದಲ್ಲಿತ್ತು, ಆ ಹುಬ್ಬುಗಳಲ್ಲಿ ಶಕ್ತಿ ಮತ್ತು ಅಧಿಕಾರವು ಅಡಕವಾಗಿತ್ತು...ನಾನು ಯಾರ ಸಮ್ಮುಖದಲ್ಲಿ ನಿಂತಿದ್ದೇನೆ ಎಂಬುದರ ಕುರಿತು ಕೇಳುವ ಅಗತ್ಯವೇ ಇಲ್ಲ..... ನಾನು ರಾಜರು ಬಯಸುತ್ತಿದ್ದ ಮತ್ತು ಸಾಮ್ರಾಟರು ಭಕ್ತಿ ಮತ್ತು ಪ್ರೇಮಗಳ ಸೆಲೆಯಾದ ಆತನ ಮುಂದೆ ನಿಷ್ಫಲವಾಗಿ ನಿಲ್ಲಲು ಯಾಚಿಸುತ್ತಿರುವವಂತಹವನ ಮುಂದೆ ಬಾಗಿ ನಿಂತಿದ್ದೆ.”

Exploring this topic:

The Life of Bahá’u’lláh

The Early Bahá’í Community

The Shrine of Bahá’u’lláh

Quotations

Articles and Resources

Scroll Up